ಗಾಝಾಕ್ಕೆ ನೆರವು ಸಾಗಿಸುತ್ತಿದ್ದ ನೌಕಾ ಸಮೂಹಕ್ಕೆ ಇಸ್ರೇಲ್ ತಡೆ: 175 ಕಾರ್ಯಕರ್ತರ ಬಂಧನ

Photo Credit : x
ಜೆರುಸಲೇಂ, ಎ.30: ಗಾಝಾಕ್ಕೆ ನೆರವು ಸಾಗಿಸುತ್ತಿದ್ದ ನೌಕೆಗಳ ಸಮೂಹವನ್ನು ಗ್ರೀಸ್ನ ಅಂತರರಾಷ್ಟ್ರೀಯ ಸಮುದ್ರದಲ್ಲಿ ಇಸ್ರೇಲ್ ಸೇನೆ ತಡೆದಿದ್ದು ಸುಮಾರು 175 ಕಾರ್ಯಕರ್ತರನ್ನು ಬಂಧಿಸಿದೆ ಎಂದು ಇಸ್ರೇಲ್ನ ವಿದೇಶಾಂಗ ಇಲಾಖೆ ಗುರುವಾರ ಹೇಳಿದೆ.
20ಕ್ಕೂ ಹೆಚ್ಚು ನೌಕೆಗಳಲ್ಲಿ ಗಾಝಾದತ್ತ ಹೊರಟಿದ್ದ ಸುಮಾರು 175 ಕಾರ್ಯಕರ್ತರು ಈಗ ಶಾಂತಿಯುತವಾಗಿ ಇಸ್ರೇಲ್ನತ್ತ ಸಾಗುತ್ತಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಹೇಳಿಕೆ ನೀಡಿದ್ದು ಇಸ್ರೇಲ್ ನೌಕಾಪಡೆಯ ಹಡಗಿನಲ್ಲಿ ಕಾರ್ಯಕರ್ತರು ಇರುವ ವೀಡಿಯೊವನ್ನು ಹಂಚಿಕೊಂಡಿದೆ.
ಗಾಝಾದ ಮೇಲಿನ ಇಸ್ರೇಲ್ನ ದಿಗ್ಬಂಧನವನ್ನು ಮುರಿಯಲು ಪ್ರಯತ್ನಿಸುತ್ತಿರುವ ಫೆಲೆಸ್ತೀನಿಯನ್ ಪರ ಕಾರ್ಯಕರ್ತರ ಗುಂಪು ಗ್ರೀಸ್ ಬಳಿಯ ಕರಾವಳಿಯಲ್ಲಿದ್ದಾಗ ಅವರ ದೋಣಿಗಳನ್ನು ಇಸ್ರೇಲ್ ಮಿಲಿಟರಿ ಹಡಗುಗಳು ಸುತ್ತುವರಿದಿವೆ ಎಂದು ಇದಕ್ಕೂ ಮುಂಚೆ ಮಾಧ್ಯಮಗಳು ವರದಿ ಮಾಡಿದ್ದವು.
Next Story




