ಗಾಝಾ: ಇಸ್ರೇಲ್ ದಾಳಿಯಲ್ಲಿ ಕನಿಷ್ಠ 9 ಫೆಲೆಸ್ತೀನಿಯನ್ನರು ಮೃತ್ಯು

ಸಾಂದರ್ಭಿಕ ಚಿತ್ರ - Photo Credit : AP
ಗಾಝಾ: ಗಾಝಾದಲ್ಲಿ ಇಸ್ರೇಲ್ ಸತತ ಎರಡನೇ ದಿನವೂ ವೈಮಾನಿಕ ದಾಳಿಗಳನ್ನು ಮುಂದುವರಿಸಿದ್ದು, ರವಿವಾರ ಕನಿಷ್ಠ ಒಂಬತ್ತು ಫೆಲೆಸ್ತೀನಿಯನ್ನರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಮಧ್ಯ ಗಾಝಾ ಪಟ್ಟಿಯ ಬಳಿ ಅಪಾರ್ಟ್ಮೆಂಟ್ ಒಂದರ ಮೇಲೆ ನಡೆದ ದಾಳಿಯಲ್ಲಿ ದಂಪತಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಗಾಝಾ ಸಿಟಿಯ ಪಶ್ಚಿಮದಲ್ಲಿರುವ ಅಪಾರ್ಟ್ಮೆಂಟ್ ಮೇಲಿನ ಮತ್ತೊಂದು ದಾಳಿಯಲ್ಲಿ ವೃದ್ಧ ಮತ್ತು ಮಗು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ದಕ್ಷಿಣ ಗಾಝಾ ಪಟ್ಟಿಯ ಖಾನ್ ಯೂನಿಸ್ನ ವಾಯುವ್ಯದಲ್ಲಿರುವ ಮವಾಸಿ ಪ್ರದೇಶದಲ್ಲಿ ಮನೆಯ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ದಂಪತಿ ಮತ್ತು ಅವರ ಮಗು ಸಾವನ್ನಪ್ಪಿದ್ದರೆ, ಉತ್ತರ ಗಾಝಾದ ಜಬಾಲಿಯಾ ಬಳಿ ನಡೆದ ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು ಇತರ ಹಲವರು ಗಾಯಗೊಂಡಿದ್ದಾರೆ ಎಂದು ಫೆಲೆಸ್ತೀನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
Next Story




