Gaza | ಇಸ್ರೇಲ್ ದಾಳಿಯಲ್ಲಿ ಮಗು ಸೇರಿ ನಾಲ್ವರು ಮೃತ್ಯು

Photo: x.com/STForeignDesk
ಗಾಝಾ, ಜು.15: ಬುಧವಾರ ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ದಂಪತಿ ಮತ್ತು ಅವರ ಆರು ವರ್ಷದ ಪುತ್ರಿ ಸೇರಿದಂತೆ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಫೆಲೆಸ್ತೀನಿಯನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯ ಗಾಝಾದ ದೀರ್ ಅಲ್-ಬಾಲಾಹ್ನಲ್ಲಿರುವ ಅಪಾರ್ಟ್ಮೆಂಟ್ ಕಟ್ಟಡವೊಂದರ ಮೇಲೆ ನಡೆದ ದಾಳಿಯಲ್ಲಿ ಪತಿ, ಪತ್ನಿ ಹಾಗೂ 6 ವರ್ಷದ ಮಗಳು ಮೃತಪಟ್ಟಿದ್ದು, ಮಗ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಹಮಾಸ್ ಉಗ್ರನನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿತ್ತು ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
ಇದೇ ವೇಳೆ, ಗಾಝಾ ನಗರದ ಶೇಖ್ ರಾಧ್ವಾನ್ ನೆರೆಹೊರೆಯಲ್ಲಿ ಇಸ್ರೇಲ್ ನಡೆಸಿದ ಮತ್ತೊಂದು ವೈಮಾನಿಕ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
Next Story




