ಗಾಝಾ | ಬಹುಮಹಡಿ ಕಟ್ಟಡಗಳು ದಾಳಿಯ ಗುರಿಯಾಗಲಿದೆ: ಇಸ್ರೇಲ್

PC : aljazeera.com
ಜೆರುಸಲೇಂ, ಸೆ.5: ಗಾಝಾ ನಗರದಲ್ಲಿ ಮತ್ತು ವಿಶೇಷವಾಗಿ ಬಹುಮಹಡಿ ಕಟ್ಟಡಗಳಲ್ಲಿರುವ ವಿವಿಧ ರೀತಿಯ ಮೂಲಸೌಕರ್ಯ ತಾಣಗಳಲ್ಲಿ ಹಮಾಸ್ ಸದಸ್ಯರ ವ್ಯಾಪಕ ಚಟುವಟಿಕೆಗಳನ್ನು ಗಮನಿಸಲಾಗಿದೆ.
ಮುಂಬರುವ ದಿನಗಳಲ್ಲಿ ಗಾಝಾ ನಗರದಲ್ಲಿ ಈ ರೀತಿಯ ಮೂಲಸೌಕರ್ಯಗಳಾಗಿ ಪರಿವರ್ತನೆಗೊಂಡಿರುವ ರಚನೆಗಳನ್ನು ಗುರಿಯಾಗಿಸಿ ಇಸ್ರೇಲ್ ಮಿಲಿಟರಿ ದಾಳಿ ನಡೆಸುತ್ತದೆ. ಕ್ಯಾಮರಾಗಳು, ವೀಕ್ಷಣಾ ಕಮಾಂಡ್ ಕೇಂದ್ರಗಳು, ಸ್ನಿಪರ್, ಟ್ಯಾಂಕ್ಗಳನ್ನು ಗುರಿಯಾಗಿಸಿ ದಾಳಿ ನಡೆಸುವ ವ್ಯವಸ್ಥೆಗಳು, ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು ದಾಳಿಯ ಗುರಿಯಾಗುತ್ತದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
Next Story





