ಗಾಝಾ: ಇಸ್ರೇಲ್ ದಾಳಿಯಲ್ಲಿ ಕನಿಷ್ಠ 23 ಮಂದಿ ಮೃತ್ಯು

PC | PTI (ಸಾಂದರ್ಭಿಕ ಚಿತ್ರ)
ಗಾಝಾ, ಆ.3: ಗಾಝಾ ಪಟ್ಟಿಯಲ್ಲಿ ಆಹಾರ ಪಡೆಯಲು ತೆರಳುತ್ತಿದ್ದ ಕನಿಷ್ಠ 23 ಫೆಲೆಸ್ತೀನೀಯರನ್ನು ಇಸ್ರೇಲ್ ಪಡೆಗಳು ಹತ್ಯೆ ನಡೆಸಿರುವುದಾಗಿ ಗಾಝಾದ ವೈದ್ಯಕೀಯ ಇಲಾಖೆ ರವಿವಾರ ಹೇಳಿದೆ.
ಖಾನ್ ಯೂನಿಸ್ ನಗರದ ಟೈನಾ ಪ್ರದೇಶದಲ್ಲಿರುವ ಆಹಾರ ವಿತರಣಾ ಕೇಂದ್ರದ ಬಳಿ ನಡೆದ ಗುಂಡಿನ ದಾಳಿಯಲ್ಲಿ 8 ಮಂದಿ, ರಫಾ ನಗರದ ಉತ್ತರದಲ್ಲಿನ ಶಾಕೌಶ್ ಪ್ರದೇಶದಲ್ಲಿ ಒಬ್ಬ ವ್ಯಕ್ತಿ, ಮೊರಾಗ್ ಕಾರಿಡಾರ್ ಬಳಿ 9 ಮಂದಿ, ನೆಟ್ಝಾರಿಮ್ ಕಾರಿಡಾರ್ನ ಜಿಎಚ್ಎಫ್ ನೆರವು ವಿತರಣಾ ಕೇಂದ್ರದ ಬಳಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಐದು ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
Next Story





