ಗಾಝಾ | ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಮೂವರು ಮೃತ್ಯು

Photo Credit : PTI
ಗಾಝಾ: ಗಾಝಾದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಬುಧವಾರ ಮೂವರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಗಾಝಾ ಪಟ್ಟಿಯ ಪ್ರದೇಶದಲ್ಲಿ ಇಸ್ರೇಲ್ ನಿಯಂತ್ರಣದಲ್ಲಿರುವ ಭಾಗಗಳ ಹೊರಗೆ ಇರುವ ಹಮಾಸ್ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ತಮ್ಮ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಇಸ್ರೇಲ್ ಸೇನೆ ಹೇಳಿದೆ.
ದಕ್ಷಿಣ ಗಾಝಾ, ಡೇರ್ ಅಲ್-ಬಲಾಹ್ ಮತ್ತು ಗಾಝಾ ಸಿಟಿಯಲ್ಲಿ ನಡೆದ ಇಸ್ರೇಲ್ ವೈಮಾನಿಕ ದಾಳಿಗಳಲ್ಲಿ ಮೂವರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಇಸ್ರೇಲ್ ನಿಯಂತ್ರಣದಲ್ಲಿರುವ ಗಾಝಾ ಪಟ್ಟಿಯ ಮೂರನೇ ಎರಡರಷ್ಟು ಭಾಗದ ಗಡಿಯನ್ನು ಗುರುತಿಸುವ `ಹಳದಿ ಗೆರೆ'ಯ ಪಶ್ಚಿಮಕ್ಕೆ ಇರುವ ಮುಖ್ಯ ಸಲಾಹುದ್ದೀನ್ ರಸ್ತೆಗೆ ಕೆಲವು ಇಸ್ರೇಲಿ ಟ್ಯಾಂಕ್ಗಳು ಪ್ರವೇಶಿಸಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
Next Story




