ಮೈಕ್ರೋಸಾಫ್ಟ್ನ ಸೇವೆಗಳಲ್ಲಿ ಜಾಗತಿಕ ವ್ಯತ್ಯಯ: ಔಟ್ಲುಕ್, ಟೀಮ್ಸ್, Copilot ಬಳಕೆದಾರರಿಗೆ ತೊಂದರೆ
ಸಾವಿರಾರು ಮಂದಿ ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ವರದಿ

Photo: x.com/Forbes
ವಾಷಿಂಗ್ಟನ್: ಮೈಕ್ರೋಸಾಫ್ಟ್ ಒದಗಿಸುವ ವಿವಿಧ ಸೇವೆಗಳಲ್ಲಿ ಗುರುವಾರ ತಾಂತ್ರಿಕ ಅಡಚಣೆ ಉಂಟಾಗಿದೆ ಎಂದು ವರದಿಯಾಗಿದೆ.
ಸುಮಾರು 1,30,000 ಮಂದಿ ಔಟ್ಲುಕ್ ಪ್ರವೇಶಿಸುವಲ್ಲಿ ಸಮಸ್ಯೆಯಾಗಿದೆ ಎಂದಿದ್ದು, ಅನೇಕರು ಇಮೇಲ್ಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ತಮ್ಮ ಇನ್ಬಾಕ್ಸ್ಗಳನ್ನು ಲೋಡ್ ಮಾಡುವಲ್ಲಿ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ ಎಂದು ಔಟೇಜ್ ಟ್ರ್ಯಾಕರ್ ಡೌನ್ಡೆಕ್ಟರ್ ತಿಳಿಸಿದೆ.
ಔಟ್ಲುಕ್, ವರ್ಡ್, ಎಕ್ಸೆಲ್, ಪವರ್ ಪಾಯಿಂಟ್, ಶೇರ್ ಪಾಯಿಂಟ್ ಮತ್ತು ಒನ್ಡ್ರೈವ್ ಸೇರಿದಂತೆ ಹಲವು ಸೇವೆಗಳಲ್ಲಿ ದೋಷ ಉಂಟಾದ ಬಳಿಕ, ಮೈಕ್ರೋಸಾಫ್ಟ್ ಈ ಸೇವೆಗಳನ್ನು ಮರುಸ್ಥಾಪಿಸಲು ಪ್ರಾರಂಭಿಸಿದೆ.
ಮೂಲಸೌಕರ್ಯದಲ್ಲಿನ ಹೆಚ್ಚಿನ ಲೋಡ್ ಸಮಸ್ಯೆಗೆ ಕಾರಣವಾಗಿರಬಹುದು. ಸ್ವಯಂಚಾಲಿತ ತಪಾಸಣೆಗಳು ವಿಫಲವಾದ ಬಳಿಕ, ಈ ಸರ್ವರ್ಗಳಲ್ಲಿ ದೋಷಗಳು ಕಾಣಿಸಿಕೊಂಡಿವೆ ಎಂದು ಮೈಕ್ರೋಸಾಫ್ಟ್ ಹೇಳಿದೆ.
ಬಳಕೆದಾರರಿಗೆ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಎಲ್ಲಾ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ ಎಂದು ಮೈಕ್ರೋಸಾಫ್ಟ್ 365 ಸ್ಟೇಟಸ್ ಖಾತೆಯು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.




