ಅಮೆರಿಕ – ಚೀನಾ ʼಸುಂಕʼಷ್ಟಕ್ಕೆ ವಿರಾಮ; ಚಿನ್ನದ ದರ ಇಳಿಮುಖ

ಸಾಂದರ್ಭಿಕ ಚಿತ್ರ (credit; Grok)
ಮುಂಬೈ : ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಗಣನೀಯ ಕುಸಿತ ಕಂಡುಬಂದಿದ್ದು, ಭಾರತದಲ್ಲಿ ಚಿನ್ನದ ದರದಲ್ಲಿ 1800 ರೂ. ಇಳಿಕೆಯಾಗಿದೆ. ಇದರೊಂದಿಗೆ ಪ್ರತಿ 10 ಗ್ರಾಂ . ಚಿನ್ನದ ಬೆಲೆ 95,050 ರೂ. ದಾಖಲಾಗಿದೆ ಎಂದು ಅಖಿಲ ಭಾರತ ಸರಾಫರ ಸಂಘ ತಿಳಿಸಿದೆ.
ಅಮೆರಿಕ ಹಾಗೂ ಚೀನಾ ನಡುವೆ ಸುಂಕ ಸಮರಕ್ಕೆ 90 ದಿನಗಳ ವಿರಾಮ ಬಿದ್ದಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಹಳದಿ ಲೋಹದ ಖರೀದಿಯ ಬದಲು ಬೇರೆ ಹೂಡಿಕೆಗಳತ್ತ ಮುಖ ಮಾಡಿರುವುದು ಚಿನ್ನದ ದರ ಕುಸಿತಕ್ಕೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.
ಬೆಳ್ಳಿಯ ದರದಲ್ಲೂ 1011 ರೂ.ಕುಸಿತವಾಗಿದ್ದು, ಪ್ರತಿ ಕೆ.ಜಿ.ಗೆ 97 ಸಾವಿರ ರೂ. ಆಗಿದೆ. ಬುಧವಾರ ಬೆಳ್ಳಿ ದರ 98 ಸಾವಿರ ರೂ. ಇತ್ತು.
Next Story





