ಇಯು ಅಧ್ಯಕ್ಷೆಯ ವಿಮಾನದ ಜಿಪಿಎಸ್ ವ್ಯವಸ್ಥೆ ನಿಷ್ಕ್ರಿಯ: ರಶ್ಯದ ಮೇಲೆ ಶಂಕೆ

ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ಡೆರ್ ಲಿಯೆನ್ | PC : REUTERS
ಬ್ರಸೆಲ್ಸ್, ಸೆ.1: ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ಡೆರ್ ಲಿಯೆನ್ ಅವರು ಪ್ರಯಾಣಿಸುತ್ತಿದ್ದ ವಿಮಾನದ ಜಿಪಿಎಸ್ ವ್ಯವಸ್ಥೆಯು ಬಲ್ಗೇರಿಯಾ ವಾಯುಪ್ರದೇಶದಲ್ಲಿ ನಿಷ್ಕ್ರಿಯಗೊಂಡಿದ್ದು ಇದಕ್ಕೆ ರಶ್ಯ ಕಾರಣವಾಗಿರಬಹುದು ಎಂದು ಯುರೋಪಿಯನ್ ಯೂನಿಯನ್ ನ ವಕ್ತಾರೆ ಅರಿಯಾನಾ ಪೊಡೆಸ್ತ ಹೇಳಿದ್ದಾರೆ.
ಬಲ್ಗೇರಿಯಾದ ಮೇಲೆ ಹಾರುತ್ತಿದ್ದಾಗ ವಿಮಾನದ ಜಿಪಿಎಸ್ ವ್ಯವಸ್ಥೆ ನಿಷ್ಕ್ರಿಯಗೊಂಡರೂ ವಿಮಾನ ಬಲ್ಗೇರಿಯಾದಲ್ಲಿ ಸುರಕ್ಷಿತವಾಗಿ ಇಳಿಯಿತು. ರಶ್ಯದ ಹಸ್ತಕ್ಷೇಪ ಇದಕ್ಕೆ ಕಾರಣವಾಗಿರಬಹುದು ಎಂದು ಬಲ್ಗೇರಿಯಾದ ಅಧಿಕಾರಿಗಳನ್ನು ಉಲ್ಲೇಖಿಸಿ ಅರಿಯಾನಾ ಹೇಳಿದ್ದಾರೆ.
Next Story





