ಒಮಾನ್ ಕೊಲ್ಲಿ: 3 ಹಡಗುಗಳಲ್ಲಿ ಬೆಂಕಿ; 24 ಮಂದಿಯ ರಕ್ಷಣೆ

PC : X \ @HustleBitch_
ಮಸ್ಕತ್: ಮಂಗಳವಾರ ಹಾರ್ಮುಜ್ ಜಲಸಂಧಿಯ ಬಳಿ ಹಡಗೊಂದು ಇತರ ಎರಡು ಹಡಗುಗಳಿಗೆ ಡಿಕ್ಕಿಯಾದ ಬಳಿಕ ಮೂರೂ ಹಡಗುಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಇದುವರೆಗೆ 24 ಮಂದಿಯನ್ನು ರಕ್ಷಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಯುಎಇಯ ಖೋರ್ ಫಕ್ಕನ್ನ ಪೂರ್ವಕ್ಕೆ 22 ನಾಟಿಕಲ್ ಮೈಲುಗಳ ದೂರದಲ್ಲಿ ಒಮಾನ್ ಕೊಲ್ಲಿಯ ಬಳಿ ಘಟನೆ ನಡೆದಿದ್ದು 24 ಮಂದಿಯನ್ನು ರಕ್ಷಿಸಿರುವುದಾಗಿ ಯುಎಇ ಕರಾವಳಿ ರಕ್ಷಣಾ ಪಡೆ ಹೇಳಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಮಂಗಳವಾರ ಮತ್ತಷ್ಟು ಹೆಚ್ಚಿರುವಂತೆಯೇ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ನಿರ್ಣಾಯಕ ಹಡಗು ಮಾರ್ಗದ ಭವಿಷ್ಯದ ಬಗ್ಗೆ ಆತಂಕ ಹೆಚ್ಚಿದೆ.
Next Story





