3 ವರ್ಷದ ಮಗುವಿನ ಬ್ಯಾಗಿನಲ್ಲಿ ಗನ್ ಪತ್ತೆ; ತಂದೆಯ ಬಂಧನ

ವಾಷಿಂಗ್ಟನ್: ಅಮೆರಿಕದ ನರ್ಸರಿ ಶಾಲೆಯ 3 ವರ್ಷದ ಮಗುವಿನ ಬ್ಯಾಗಿನಲ್ಲಿ ಗನ್ ಪತ್ತೆಯಾದ ಆಘಾತಕಾರಿ ಘಟನೆ ಅಮೆರಿಕದ ಸ್ಯಾನ್ ಅಂಟೋನಿಯೊ ನಗರದಲ್ಲಿ ವರದಿಯಾಗಿದೆ.
ಉನ್ನತ ಮೂಲಗಳ ಪ್ರಕಾರ, ತನ್ನ ಬ್ಯಾಗಿನಲ್ಲಿ ಗನ್ ಇದೆ ಎಂಬುದು ಆ ಮಗುವಿಗೂ ತಿಳಿದಿರಲಿಲ್ಲ. ಮಗುವಿನ ಬ್ಯಾಗಿನಲ್ಲಿ ಗನ್ ಇರುವುದನ್ನು ಕಂಡ ಶಿಕ್ಷಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಅಲ್ಲಿಗೆ ಬಂದ ಪೊಲೀಸರು ಗನ್ ಅನ್ನು ವಶಕ್ಕೆ ಪಡೆದು ಮಗುವಿನ ತಂದೆಯನ್ನು `ಮಕ್ಕಳನ್ನು ಅಪಾಯಕ್ಕೆ ಒಡ್ಡಿದ' ಆರೋಪದಲ್ಲಿ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
Next Story