ಎಚ್-1ಬಿ ವೀಸಾ ಶುಲ್ಕ ಹೆಚ್ಚಳ ಪ್ರಶ್ನಿಸಿ ಟ್ರಂಪ್ ವಿರುದ್ಧ ಮೊಕದ್ದಮೆ

ಸಾಂದರ್ಭಿಕ ಚಿತ್ರ | Photo Credit : freepik
ವಾಷಿಂಗ್ಟನ್, ಡಿ.13: ಎಚ್-1ಬಿ ವೀಸಾ ಶುಲ್ಕ ಹೆಚ್ಚಿಸಿರುವುದನ್ನು ಪ್ರಶ್ನಿಸಿ ಟ್ರಂಪ್ ಆಡಳಿತದ ವಿರುದ್ಧ ಅಮೆರಿಕಾದ 20 ರಾಜ್ಯಗಳ ಒಕ್ಕೂಟ ಮೊಕದ್ದಮೆ ದಾಖಲಿಸಿರುವುದಾಗಿ ವರದಿಯಾಗಿದೆ.
ಎಚ್-1ಬಿ ವೀಸಾ ಶುಲ್ಕವನ್ನು 1 ಲಕ್ಷ ಡಾಲರ್ ಗೆ ಹೆಚ್ಚಿಸಿ ಸೆಪ್ಟಂಬರ್ 19ರಂದು ದೇಶೀಯ ಭದ್ರತೆ ಇಲಾಖೆ ಜಾರಿಗೊಳಿಸಿದ ಆದೇಶವನ್ನು ಪ್ರಶ್ನಿಸಿ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ರಾಬ್ ಬೋಟ್ನ ನೇತೃತ್ವದಲ್ಲಿ 20 ರಾಜ್ಯಗಳು ಮೊಕದ್ದಮೆ ದಾಖಲಿಸಿವೆ.
ಹೊಸ ನೀತಿಯು ವೀಸಾ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲು ಕಾನೂನುಬಾಹಿರ ಪ್ರಯತ್ನವಾಗಿದ್ದು ಟ್ರಂಪ್ ಆಡಳಿತವು ಸಂಸತ್ತು ನೀಡಿದ ಅಧಿಕಾರವನ್ನು ಮೀರಿದೆ ಮತ್ತು ಆಡಳಿತಾತ್ಮಕ ಕಾರ್ಯವಿಧಾನದ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ದಾವೆಯಲ್ಲಿ ಉಲ್ಲೇಖಿಸಲಾಗಿದೆ.
Next Story





