H-1B ವೀಸಾಗೆ 1 ಲಕ್ಷ ಡಾಲರ್ ಶುಲ್ಕಕ್ಕೆ ಅಮೆರಿಕ ನ್ಯಾಯಾಲಯದಿಂದ ತಡೆ

ಸಾಂದರ್ಭಿಕ ಚಿತ್ರ | Photo Credit : magnific
ವಾಶಿಂಗ್ಟನ್, ಜು.25: ಉನ್ನತ ಕೌಶಲ್ಯ ಹೊಂದಿರುವ ವಿದೇಶಿ ಉದ್ಯೋಗಿಗಳಿಗೆ ನೀಡಲಾಗುವ H-1B ವೀಸಾಗಳ ಮೇಲೆ 1,00,000 ಡಾಲರ್ ಶುಲ್ಕ ವಿಧಿಸುವ ಟ್ರಂಪ್ ಆಡಳಿತದ ನಿರ್ಧಾರವನ್ನು ರದ್ದುಗೊಳಿಸಿದ್ದ ಕೆಳ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಲು ಅಮೆರಿಕದ ಫೆಡರಲ್ ಮೇಲ್ಮನವಿ ನ್ಯಾಯಾಲಯ ನಿರಾಕರಿಸಿದೆ.
ಜೂನ್ 8ರಂದು ಅಮೆರಿಕದ ಜಿಲ್ಲಾ ನ್ಯಾಯಾಧೀಶರು ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಬೇಕೆಂಬ ಫೆಡರಲ್ ಸರಕಾರದ ಮನವಿಯನ್ನು ಬಾಸ್ಟನ್ ಮೂಲದ 'ಫಸ್ಟ್ ಸರ್ಕ್ಯೂಟ್ ಕೋರ್ಟ್ ಆಫ್ ಅಪೀಲ್ಸ್'ನ ಮೂವರು ನ್ಯಾಯಾಧೀಶರ ಪೀಠ ತಿರಸ್ಕರಿಸಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸ H-1B ವೀಸಾಗಳಿಗೆ 1 ಲಕ್ಷ ಡಾಲರ್ ಶುಲ್ಕವನ್ನು ಕಡ್ಡಾಯಗೊಳಿಸಿ ಘೋಷಣೆ ಮಾಡಿದ ನಂತರ ಈ ಶುಲ್ಕವನ್ನು ಜಾರಿಗೆ ತರಲಾಗಿತ್ತು.
Next Story




