ರಫಾ ಕ್ರಾಸಿಂಗ್ ಮುಚ್ಚಿರುವುದರಿಂದ ಮೃತದೇಹ ಹಸ್ತಾಂತರ ವಿಳಂಬ : ಹಮಾಸ್

PC: x.com/WIONews
ಗಾಝಾ, ಅ.19: ಈಜಿಪ್ಟ್ ಮತ್ತು ಗಾಝಾದ ನಡುವಿನ ರಫಾ ಗಡಿದಾಟನ್ನು ಮುಚ್ಚಿರುವುದು ಒತ್ತೆಯಾಳುಗಳ ಮೃತದೇಹಗಳ ಹಸ್ತಾಂತರವನ್ನು ವಿಳಂಬಗೊಳಿಸಲಿದೆ ಎಂದು ಹಮಾಸ್ ಹೇಳಿದೆ.
ಗಡಿ ದಾಟನ್ನು ಮುಚ್ಚಿರುವುದರಿಂದ ಗಾಝಾದಲ್ಲಿ ರಾಶಿಬಿದ್ದಿರುವ ಕಟ್ಟಡಗಳ ಅವಶೇಷಗಳಡಿಯಿಂದ ಮೃತದೇಹಗಳನ್ನು ಪತ್ತೆಹಚ್ಚಿ ಹೊರತೆಗೆಯುವ ಅತ್ಯಾಧುನಿಕ ಸಾಧನಗಳು ಗಾಝಾ ತಲುಪಲು ಸಾಧ್ಯವಾಗುತ್ತಿಲ್ಲ. ಇದರಿಂದ ಮೃತದೇಹಗಳನ್ನು ಪತ್ತೆಹಚ್ಚುವ ಮತ್ತು ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ಗಣನೀಯ ವಿಳಂಬವಾಗುತ್ತಿದೆ' ಎಂದು ಹಮಾಸ್ನ ಹೇಳಿಕೆ ತಿಳಿಸಿದೆ. ಟ್ರಂಪ್ ಪ್ರಸ್ತಾಪಿಸಿದ್ದ ಕದನ ವಿರಾಮ ಒಪ್ಪಂದದ ಪ್ರಕಾರ ಇದುವರೆಗೆ ಹಮಾಸ್ 20 ಜೀವಂತ ಒತ್ತೆಯಾಳುಗಳನ್ನು ಮತ್ತು 9 ಇಸ್ರೇಲಿ, ಒಬ್ಬ ನೇಪಾಳಿ ಒತ್ತೆಯಾಳುವಿನ ಮೃತದೇಹವನ್ನು ಹಸ್ತಾಂತರಿಸಿದೆ.
Next Story





