ಗಾಝಾದಲ್ಲಿ ಹಮಾಸ್ ಸೇನಾ ವಿಭಾಗದ ನಾಯಕನ ಹತ್ಯೆ

Photo Credit : aljazeera.com
ಜೆರುಸಲೇಂ: ಫೆಲೆಸ್ತೀನ್ ಹೋರಾಟಗಾರ ಸಂಘಟನೆ ಹಮಾಸ್ನ ಸೇನಾ ಘಟಕದ ನಾಯಕನನ್ನು ಗಾಝಾದಲ್ಲಿ ತಾನು ಹತ್ಯೆಗೈದಿರುವುದಾಗಿ ಇಸ್ರೇಲ್ ಶನಿವಾರ ತಿಳಿಸಿದೆ.
ಗಾಝಾ ನಗರದಲ್ಲಿ ಶುಕ್ರವಾರ ನಡೆದ ದಾಳಿಯಲ್ಲಿ ಹಮಾಸ್ನ ಹಿರಿಯ ಸೇನಾ ಕಮಾಂಡರ್ಗಳಲ್ಲಿ ಒಬ್ಬರಾದ ಇಝ್ಝ್ ಅಲ್ ದೀನ್ ಅಲ್ ಹದ್ದಾದ್ ಸಾವನ್ನಪ್ಪಿದ್ದಾರೆ. ಇಝ್ಝ್ ಅಲ್ ದೀನ್ ಅಲ್ ಹದ್ದಾದ್ ಆಕ್ಟೋಬರ್ 7ರಂದು ಹಮಾಸ್ ನೇತೃತ್ವದಲ್ಲಿ ಇಸ್ರೇಲ್ ಮೇಲೆ ನಡೆದ ದಾಳಿಗೆ ಸಂಚನ್ನು ರೂಪಿಸಲು ಹಾಗೂ ಕಾರ್ಯಗತಗೊಳಿಸಲು ನಿರ್ದೇಶನ ನೀಡಿದ್ದರೆಂದು ಇಸ್ರೇಲ್ ಸೇನೆಯ ಹೇಳಿಕೆ ತಿಳಿಸಿದೆ.
ಹಮಾಸ್ನ ಹಿರಿಯ ಕಮಾಂಡರ್ ಮೊಹಮ್ಮದ್ ಸಿನ್ವರ್ ಇಸ್ರೇಲ್ ದಾಳಿಯಲ್ಲಿ ಸಾವನ್ನಪ್ಪಿದ ಬಳಿಕ ಅವರ ಉತ್ತರಾಧಿಕಾರಿಯಾಗಿ ಹದ್ದಾದ್ ನಿಯೋಜಿತರಾಗಿದ್ದರು. ಹದ್ದಾದ್ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿರುವುದನ್ನು ಅವರ ಕುಟುಂಬಿಕರು ದೃಢಪಡಿಸಿದ್ದಾರೆಂದು ಅಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
Next Story




