ಹಮಾಸ್ ಗಾಝಾ ನಿಯಂತ್ರಣವನ್ನು ಒಪ್ಪಿಸಬೇಕು: ಫೆಲೆಸ್ತೀನಿನ ಪ್ರಧಾನಿ ಆಗ್ರಹ

(ಫೆಲೆಸ್ತೀನಿನ ಪ್ರಧಾನಿ ಮುಹಮ್ಮದ್ ಮುಸ್ತಾಫಾ) PC | Reuters
ಗಾಝಾ, ಜು.29: ಯುದ್ಧದಿಂದ ಜರ್ಝರಿತಗೊಂಡಿರುವ ಗಾಝಾ ಪ್ರದೇಶದಲ್ಲಿ ಸುರಕ್ಷತೆಯನ್ನು ಮರುಸ್ಥಾಪಿಸಲು ಹಮಾಸ್ ಶಸ್ತ್ರಾಸ್ತ್ರ ತ್ಯಜಿಸಬೇಕು ಮತ್ತು ಗಾಝಾದ ನಿಯಂತ್ರಣವನ್ನು ಫೆಲೆಸ್ತೀನಿನ ಪ್ರಾಧಿಕಾರಕ್ಕೆ ವಹಿಸಬೇಕು ಎಂದು ಫೆಲೆಸ್ತೀನಿನ ಪ್ರಧಾನಿ ಮುಹಮ್ಮದ್ ಮುಸ್ತಾಫಾ ಹೇಳಿದ್ದಾರೆ.
`ಇಸ್ರೇಲ್ ಮತ್ತು ಫೆಲೆಸ್ತೀನೀಯರಿಗೆ ಎರಡು ದೇಶಗಳ ಪರಿಹಾರ ಸೂತ್ರ' ವಿಷಯದ ಕುರಿತು ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಮಾತನಾಡಿದ ಅವರು ` ಇಸ್ರೇಲ್ ಗಾಝಾ ಪಟ್ಟಿಯಿಂದ ಸಂಪೂರ್ಣ ಹಿಂದೆ ಸರಿಯಬೇಕು ಮತ್ತು ಹಮಾಸ್ ಗಾಝಾ ಪಟ್ಟಿಯ ನಿಯಂತ್ರಣವನ್ನು ತ್ಯಜಿಸಿ ತನ್ನ ಶಸ್ತ್ರಾಸ್ತ್ರಗಳನ್ನು ಫೆಲೆಸ್ತೀನಿಯನ್ ಪ್ರಾಧಿಕಾರ(ಪಿಎ)ಕ್ಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
Next Story





