ಹಮಾಸ್ ನ ನೌಕಾದಳ ಕಮಾಂಡರ್ ಹತ್ಯೆ: ಇಸ್ರೇಲ್

Photo : AP
ಜೆರುಸಲೇಂ: ಉತ್ತರ ಗಾಝಾದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಹಮಾಸ್ ನ ನೌಕಾದಳದ ಕಮಾಂಡರ್ ರಮ್ಝಿ ರಮಾದಾನ್ ಅಬ್ದು ಅಲಿ ಸಲೆಹ್ ಹಾಗೂ ಹಮಾಸ್ ನ ಇತರ ಕೆಲವು ಸದಸ್ಯರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ನ ರಕ್ಷಣಾ ಪಡೆಗಳು ರವಿವಾರ ಹೇಳಿವೆ.
ಗಾಝಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಡಿಎಫ್(ಇಸ್ರೇಲ್ ರಕ್ಷಣಾ ಪಡೆ)ನ ವಿರುದ್ಧ ಸಮುದ್ರಮಾರ್ಗದ ಮೂಲಕ ಭಯೋತ್ಪಾದಕ ದಾಳಿಯನ್ನು ಯೋಜಿಸಿ ಮುನ್ನಡೆಸುವ ಜವಾಬ್ದಾರಿಯನ್ನು ಅಲಿ ಸಲೆಹ್ ನಿರ್ವಹಿಸಿದ್ದರು. ಜೊತೆಗೆ, ಹಮಾಸ್ ನ ಫಿರಂಗಿ ಶೆಲ್ ವಿಭಾಗದ ಸಹಾಯಕ ಮುಖ್ಯಸ್ಥ ಹಿಷಾಮ್ ಅಯ್ಮಾನ್ ಮನ್ಸೂರ್ ಸೇರಿದಂತೆ ಹಲವು ನಾಯಕರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಸೇನೆ ಘೋಷಿಸಿದೆ.
Next Story