ಅನುದಾನಕ್ಕೆ ತಡೆ: ಟ್ರಂಪ್ ಆಡಳಿತದ ವಿರುದ್ಧ ಮೊಕದ್ದಮೆ ದಾಖಲಿಸಿದ ಹಾರ್ವರ್ಡ್ ವಿವಿ

ಡೊನಾಲ್ಡ್ ಟ್ರಂಪ್ | PTI
ನ್ಯೂಯಾರ್ಕ್: ಸರ್ಕಾರಿ ಅನುದಾನವನ್ನು ತಡೆಹಿಡಿಯುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ನಿರ್ಧಾರವನ್ನು ಪ್ರಶ್ನಿಸಿ ಮೊಕದ್ದಮೆ ದಾಖಲಿಸಿರುವುದಾಗಿ ಹಾರ್ವರ್ಡ್ ವಿವಿ ಘೋಷಿಸಿದೆ.
ವಿವಿಯ ಆಡಳಿತ ಮಂಡಳಿಯಲ್ಲಿ ವ್ಯಾಪಕ ಸುಧಾರಣೆಯಾಗಬೇಕು ಮತ್ತು ಪ್ರವೇಶ ನೀತಿಯಲ್ಲಿ ಬದಲಾವಣೆಯಾಗಬೇಕು. ವಿವಿಯಲ್ಲಿನ ಕೆಲವು ವಿದ್ಯಾರ್ಥಿ ಕ್ಲಬ್ ಗಳ ಮಾನ್ಯತೆ ರದ್ದುಗೊಳಿಸಬೇಕು ಮತ್ತು ವಿದ್ಯಾರ್ಥಿಗಳ ಚಟುವಟಿಕೆಯ ಮೇಲೆ ನಿಗಾ ವಹಿಸಬೇಕು ಎಂದು ಎಪ್ರಿಲ್ 11ರಂದು ಹಾರ್ವರ್ಡ್ ವಿವಿಗೆ ಬರೆದಿದ್ದ ಪತ್ರದಲ್ಲಿ ಟ್ರಂಪ್ ಆಡಳಿತ ಸೂಚಿಸಿತ್ತು.
ಆದರೆ ಇದನ್ನು ಧಿಕ್ಕರಿಸುವುದಾಗಿ ವಿವಿ ಆಡಳಿತ ಮಂಡಳಿ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ವಿವಿಗೆ ನೀಡುತ್ತಿದ್ದ 2.2 ಶತಕೋಟಿ ಡಾಲರ್ಗೂ ಹೆಚ್ಚಿನ ಅನುದಾನಕ್ಕೆ ಟ್ರಂಪ್ ಆಡಳಿತ ತಡೆಯೊಡ್ಡಿತ್ತು. ಟ್ರಂಪ್ ಸರಕಾರದ ಕ್ರಮದಿಂದಾಗಿ ಸಂಶೋಧನಾ ಕಾರ್ಯಕ್ರಮಕ್ಕೆ ಸಮಸ್ಯೆಯಾಗುತ್ತದೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಆದ್ದರಿಂದ ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುವುದಾಗಿ ವಿವಿಯ ಆಡಳಿತ ಮಂಡಳಿ ಹೇಳಿದೆ.
ನಿರಂಕುಶ, ಸ್ವಚ್ಛಂದ ನಾಗರಿಕ ಹಕ್ಕುಗಳ ಕಾಯ್ದೆಯ ಶಾಸನಬದ್ಧ ನಿಬಂಧನೆಗಳನ್ನು ಉಲ್ಲಂಘಿಸಿದೆ







