ಭಾಷಣದ ಮಧ್ಯೆ ಬಂದ ಚೀನಾದ ಟಿಪ್ಪಣಿ; ಫಿಲಿಪ್ಪೀನ್ಸ್ ರಕ್ಷಣಾ ಸಚಿವ ಮಾಡಿದ್ದೇನು?
ಮತ್ತಷ್ಟು ಹದಗೆಟ್ಟ ಚೀನಾ-ಫಿಲಿಪ್ಪೀನ್ಸ್ ಸಂಬಂಧ

Photo: X/@dndphl
ಬೀಜಿಂಗ್: ಚೀನಾ ಮತ್ತು ಫಿಲಿಪ್ಪೀನ್ಸ್ ನಡುವಿನ ಈಗಾಗಲೇ ಬಿಗಡಾಯಿಸಿದ್ದ ರಾಜತಾಂತ್ರಿಕ ಸಂಬಂಧಗಳು ಮತ್ತಷ್ಟು ಹದಗೆಟ್ಟಿದೆ. ದಕ್ಷಿಣ ಚೀನಾ ಸಮುದ್ರದ ಸಾಗರ ಪ್ರದೇಶಗಳ ಮೇಲಿನ ತನ್ನ ಹಕ್ಕು ಪ್ರತಿಪಾದನೆಗಳನ್ನು ಚೀನಾ ಹೆಚ್ಚು ಆಕ್ರಮಣಕಾರಿಯಾಗಿ ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳು ಬಹಿರಂಗ ವಾಗ್ವಾದದಲ್ಲಿ ತೊಡಗಿಕೊಂಡಿವೆ.
ಮಂಗಳವಾರ ದಕ್ಷಿಣ ಕೊರಿಯಾದ ಸಿಯೋಲ್ನಲ್ಲಿ ನಡೆದ ರಕ್ಷಣಾ ವೇದಿಕೆಯಲ್ಲಿ ಫಿಲಿಪ್ಪೀನ್ಸ್ ರಕ್ಷಣಾ ಸಚಿವ ಗಿಲ್ಬರ್ಟೊ ಟಿಯೊಡೊರೊ ಜೂನಿಯರ್ ಅವರಿಗೆ ಚೀನಾದವರೆನ್ನಲಾದ ವ್ಯಕ್ತಿಯೊಬ್ಬರು ಟಿಪ್ಪಣಿ ನೀಡುವುದರೊಂದಿಗೆ ಇದು ಆರಂಭವಾಯಿತು.
ಟಿಪ್ಪಣಿಯನ್ನು ಓದಿದ ಸಚಿವರು, ಅದರಲ್ಲಿ “ಚೀನಾ ಮಧ್ಯಸ್ಥಿಕೆ ತೀರ್ಪನ್ನು ಒಪ್ಪುವುದಿಲ್ಲ ಅಥವಾ ಮಾನ್ಯ ಮಾಡುವುದಿಲ್ಲ” ಎಂದು ಬರೆಯಲಾಗಿದೆ ಎಂದು ಹೇಳಿದರು. ಬಳಿಕ ಪ್ರೇಕ್ಷಕರತ್ತ ಮುಖಮಾಡಿ, ಖಂಡಿತವಾಗಿಯೂ, ಏಕೆಂದರೆ ನೀವು ಸೋತಿದ್ದೀರಿ, ಸ್ವಲ್ಪವಾದರೂ ಸಭ್ಯತೆ ಇರಲಿ, ಸ್ವಲ್ಪವಾದರೂ ನಾಚಿಕೆ ಇರಲಿ. ಈ ಟಿಪ್ಪಣಿಯು ಅಂತಾರಾಷ್ಟ್ರೀಯ ಕಾನೂನಿಗೆ ತೋರಿದ ಅಗೌರವವನ್ನು ಪ್ರತಿಬಿಂಬಿಸುತ್ತದೆʼ ಎಂದು ಟಿಯೊಡೊರೊ ಹೇಳಿದರು.
ಚೀನಾದ ಪ್ರತಿನಿಧಿಗಳೂ ಈ ವೇದಿಕೆಯಲ್ಲಿ ಭಾಗವಹಿಸಿದ್ದರು. ಆದರೆ, ಅವರು ಪ್ಯಾನೆಲಿಸ್ಟ್ಗಳು ಅಥವಾ ಭಾಷಣಕಾರರಾಗಿರಲಿಲ್ಲ. ಈ ಘಟನೆಯ ಕುರಿತು ಮಾತನಾಡಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೊ ನಿಂಗ್, ಈ ನಿರ್ದಿಷ್ಟ ಘಟನೆಯ ಬಗ್ಗೆ ನಮಗೆ ಮಾಹಿತಿ ಇಲ್ಲ. ಆದರೆ, ದಕ್ಷಿಣ ಚೀನಾ ಸಮುದ್ರದ ಮಧ್ಯಸ್ಥಿಕೆ ಪ್ರಕರಣದ ಕುರಿತು ಚೀನಾದ ನಿಲುವು ಸ್ಪಷ್ಟ ಮತ್ತು ಸ್ಥಿರವಾಗಿದೆ ಎಂದು ಹೇಳಿದರು.
MAHIYA NAMAN KAYO | Secretary of National Defense Gilberto C. Teodoro, Jr. responded to a note from the Chinese side during the Seoul Defense Dialogue (SDD) 2026 in Seoul, Republic of Korea.#DNDPHL #DiKaPasisiil #SDD2026 pic.twitter.com/fsCRVphkgf
— Department of National Defense - Philippines (@dndphl) September 8, 2026






