ಯುರೋಪ್ಗೆ ಶಾಪವಾಗಲಿರುವ ಉಷ್ಣಮಾರುತ : 2100ರೊಳಗೆ 10 ಕೋಟಿಗೂ ಅಧಿಕ ಮಂದಿ ಬಡತನದಂಚಿಗೆ ; ವರದಿ

Photo Credit : AP
ಲಂಡನ್,ಜೂ.25: ಉಷ್ಣಮಾರುತ ಹಾಗೂ ಬರಗಾಲಕ್ಕೆ ಕಾರಣವಾಗಿರುವ ಹವಾಮಾನ ಬದಲಾವಣೆಯಿಂದಾಗಿ 2100ರೊಳಗೆ 10 ಕೋಟಿಗೂ ಅಧಿಕ ಯುರೋಪಿಯನ್ನರು ಬಡತನದ ಕೂಪಕ್ಕೆ ಜಾರಲಿದ್ದಾರೆಂದು ಅಧ್ಯಯನ ವರದಿಯೊಂದು ತಿಳಿಸಿದೆ. ಈಗಾಗಲೇ ಮಾರಣಾಂತಿಕ ಉಷ್ಣಮಾರುತದಿಂದ ತತ್ತರಿಸಿರುವ ಯುರೋಪ್ನಲ್ಲಿ ಹೆಚ್ಚುತ್ತಿರುವ ತಾಪಮಾನವು ಖಂಡದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮವನ್ನು ಬೀರಲಿದೆಯೆಂದು ಅಧ್ಯಯನ ವರದಿ ತಿಳಿಸಿದೆ.
ತೀವ್ರ ತಾಪಮಾನದ ಜೊತೆ ಬರಪರಿಸ್ಥಿತಿ ಉಂಟಾದಲ್ಲಿ ಆರ್ಥಿಕತೆಯ ಮೇಲೆ ಅದರಿಂದ ಆಗುವ ಪರಿಣಾಮ ಅಗಾಧವಾಗಿದ್ದು, ಬಡತನದ ಹೆಚ್ಚಳಕ್ಕೆ ಕಾರಣವಾಗಲಿದೆ. ಹೆಚ್ಚುತ್ತಿರುವ ಜಾಗತಿಕ ತಾಪಮಾನವು ಆದಾಯ ಅಸಮಾನತೆಗೆ ಕಾರಣವಾಗಲಿದೆ ಹಾಗೂ ಲಕ್ಷಾಂತರ ಜನರು ಬಡತನದ ಅಪಾಯವನ್ನು ಎದುರಿಸಲಿದ್ದಾರೆಂದು ಅಧ್ಯಯನ ವರದಿ ತಿಳಿಸಿದೆ.
ಯುರೋಪ್ ಉಷ್ಣ ಮಾರುತದ ದವಡೆಗೆ ಸಿಲುಕಿದ್ದು, ಕೆಲವು ಭಾಗಗಳಲ್ಲಿ ಹೆಚ್ಚುಕಮ್ಮಿ 41 ಡಿಗ್ರಿ ಸೆಲ್ಸಿಯಸ್ ವರೆಗೆ ಏರಿಕೆಯಾಗಿದೆ.1947ರಲ್ಲಿ ದಾಖಲೀಕರಣ ಆರಂಭಗೊಂಡ ಬಳಿಕ ಈ ವರ್ಷ ಫ್ರಾನ್ಸ್ ಅತ್ಯಧಿಕ ತಾಪಮಾನಕ್ಕೆ ಸಾಕ್ಷಿಯಾಗಿದ್ದು, ದೇಶದ ಅರ್ಧಾಂಶಕ್ಕಿಂತಲೂ ಅಧಿಕ ಭಾಗದಲ್ಲಿ ರೆಡ್ಆಲರ್ಟ್ ಘೋಷಿಸಲಾಗಿದೆ. ಸ್ಪೇನ್ನಲ್ಲಿಯೂ 1950ರಿಂದೀಚೆಗೆ ಈ ವರ್ಷ ಅತ್ಯಧಿಕ ಸರಾಸರಿ ತಪಾಮಾನ ದಾಖಲಾಗಿದೆ. ಬ್ರಿಟನ್ ಕೂಡಾ ದಾಖಲೆಯ ತಾಪಮಾನಕ್ಕೆ ಸಾಕ್ಷಿಯಾಗಿದೆ.‘ ಒಮೆಗಾ ಬ್ಲಾಕ್’ ಎಂಬ ಶಕ್ತಿಶಾಲಿ ಭೂಕಂಪನಶಾಸ್ತ್ರ ವಿದ್ಯಮಾನದಿಂದ ಪಶ್ಚಿಮ ಹಾಗೂ ಕೇಂದ್ರ ಯುರೋಪ್ನಲ್ಲಿ ಐತಿಹಾಸಿಕ ಹಾಗೂ ಮಾರಣಾಂತಿಕ ಉಷ್ಣಮಾರುತ ದಾಖಲಾಗಿದೆ.






