ಫಿಲಿಪ್ಪೀನ್ಸ್ ನಲ್ಲಿ ಹೆಲಿಕಾಪ್ಟರ್ ಪತನ : 6 ಮಂದಿ ಮೃತ್ಯು

Photo: indiatoday
ಮನಿಲಾ, ನ.4: ಫಿಲಿಪ್ಪೀನ್ಸ್ಗೆ ಚಂಡಮಾರುತ ಅಪ್ಪಳಿಸಿದ ಬಳಿಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಮಿಲಿಟರಿ ಹೆಲಿಕಾಪ್ಟರ್ ಮಂಗಳವಾರ ಪತನಗೊಂಡಿದ್ದು 6 ಸಿಬ್ಬಂದಿಗಳು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಚಂಡಮಾರುತದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯ ತಂಡದ ಭಾಗವಾಗಿದ್ದ ಹೆಲಿಕಾಪ್ಟರ್ ಮಿಂಡಾನೊ ದ್ವೀಪದಲ್ಲಿ ಪತನಗೊಂಡಿರುವುದಾಗಿ ಮಿಲಿಟರಿಯ ಮೂಲಗಳು ಹೇಳಿವೆ.
Next Story





