ಇಸ್ರೇಲ್ ನ ಬೆದರಿಕೆಗೆ ಬಗ್ಗುವುದಿಲ್ಲ: ಹಿಜ್ಬುಲ್ಲಾ

Photo : AFP
ಬೈರೂತ್: ಇಸ್ರೇಲಿನ ಬೆದರಿಕೆಗೆ ಹೆದರಿ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗುಂಪು ಶಸ್ತ್ರಾಸ್ತ್ರ ಕೆಳಗಿರಿಸಿ ಶರಣಾಗುವ ಪ್ರಶ್ನೆಯೇ ಇಲ್ಲ ಎಂದು ಹಿಜ್ಬುಲ್ಲಾ ನಾಯಕ ನಯೀಮ್ ಖಾಸೆಮ್ ರವಿವಾರ ಹೇಳಿದ್ದಾರೆ.
`ಈ ಬೆದರಿಕೆಗೆ ಬಗ್ಗಿ ನಾವು ಶರಣಾಗತಿಯನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ಇಸ್ರೇಲ್ ನ ಆಕ್ರಮಣ ಮೊದಲು ಕೊನೆಗೊಂಡರೆ ಮಾತ್ರ ಹಿಜ್ಬುಲ್ಲಾ ಹೋರಾಟಗಾರರು ತಮ್ಮ ಶಸ್ತ್ರಾಸ್ತ್ರ ತ್ಯಜಿಸಬಹುದು ' ಎಂದು ಲೆಬನಾನಿನ ಬೈರೂತ್ ನಲ್ಲಿ ತನ್ನ ಸಾವಿರಾರು ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಖಾಸೆಮ್ ಘೋಷಿಸಿದ್ದಾರೆ. ಕಳೆದ ಸೆಪ್ಟಂಬರ್ನಲ್ಲಿ ಹಿಜ್ಬುಲ್ಲಾದ ನಾಯಕ ಹಸನ್ ನಸ್ರಲ್ಲಾ ಇಸ್ರೇಲ್ ದಾಳಿಯಲ್ಲಿ ಸಾವನ್ನಪ್ಪಿದ ಬಳಿಕ ಅವರ ಸ್ಥಾನದಲ್ಲಿ ನಯೀಮ್ ಖಾಸೆಮ್ ನೇಮಕಗೊಂಡಿದ್ದಾರೆ.
Next Story