ಐತಿಹಾಸಿಕ ಲಾಹೋರ್ ಗುರುದ್ವಾರ 79 ವರ್ಷಗಳ ನಂತರ ಪ್ರಾರ್ಥನೆಗಾಗಿ ಪುನರಾರಂಭ

ಸಾಂದರ್ಭಿಕ ಚಿತ್ರ | Photo Credit : Wikimedia Commons
ಲಾಹೋರ್: ಪಾಕಿಸ್ತಾನದ ಲಾಹೋರ್ನಲ್ಲಿರುವ ಐತಿಹಾಸಿಕ ಗುರುದ್ವಾರವೊಂದು 1947ರ ಉಪಖಂಡದ ವಿಭಜನೆಯ ನಂತರ ಮುಚ್ಚಲ್ಪಟ್ಟಿದ್ದು, 79 ವರ್ಷಗಳ ಸುದೀರ್ಘ ವಿರಾಮದ ನಂತರ ರವಿವಾರ ಧಾರ್ಮಿಕ ಪ್ರಾರ್ಥನೆಗಾಗಿ ಮತ್ತೆ ತೆರೆದಿದೆ.
ಗುರುದ್ವಾರ ಶ್ರೀ ಗುರು ಹರಗೋಬಿಂದ್ ಸಾಹಿಬ್ನ ಪುನರಾರಂಭದ ಸಮಾರಂಭವು ಸಿಖ್ ಧಾರ್ಮಿಕ ಸಂಪ್ರದಾಯಗಳಂತೆ ಜರುಗಿತು ಮತ್ತು ಸಿಖ್ ಸಮುದಾಯದ ಸದಸ್ಯರು ಇದರಲ್ಲಿ ಭಾಗವಹಿಸಿದ್ದರು. ಈ ಗುರುದ್ವಾರವು ಗುರು ಹರಗೋಬಿಂದ್ ಸಾಹಿಬ್ ಅವರು ಲಾಹೋರ್ಗೆ ನೀಡಿದ್ದ ಭೇಟಿಯ ನೆನಪಿನೊಂದಿಗೆ ಸಂಬಂಧ ಹೊಂದಿದೆ.
Next Story




