ಒತ್ತೆಯಾಳು-ಕೈದಿಗಳ ವಿನಿಮಯ ವಿಷಯ ಮಾತುಕತೆಗೆ ಅಡ್ಡಿ: ಹಮಾಸ್

Photo: NDTV
ಗಾಝಾ, ಜು.26: ಒತ್ತೆಯಾಳು-ಕೈದಿಗಳ ವಿನಿಮಯ ಹಾಗೂ ಗಾಝಾದಿಂದ ಇಸ್ರೇಲ್ ಪಡೆಗಳ ವಾಪಸಾತಿ ವೇಳಾಪಟ್ಟಿಯ ವಿಷಯಗಳು ಮಾತುಕತೆಯಲ್ಲಿ ಅಡಚಣೆಗಳಾಗಿವೆ ಎಂದು ಹಮಾಸ್ ಅಧಿಕಾರಿಗಳು ಹೇಳಿದ್ದಾರೆ.
ಅಮೆರಿಕದ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಮಾತುಕತೆಯ ವಾಸ್ತವತೆಯನ್ನು ವಿರೂಪಗೊಳಿಸಿದ್ದಾರೆ ಮತ್ತು ಬಹುತೇಕ ಅಂತಿಮಗೊಂಡಿದ್ದ ಒಪ್ಪಂದದಿಂದ ಹಿಂದೆ ಸರಿದಿದ್ದಾರೆ. ವಿಟ್ಕಾಫ್ ಇಸ್ರೇಲ್ ಪ್ರತಿನಿಧಿಯಂತೆ ಕಾರ್ಯ ನಿರ್ವಹಿಸುತ್ತಿದ್ದರು ' ಎಂದು ಹಮಾಸ್ ನ ಹಿರಿಯ ಅಧಿಕಾರಿ ಬಾಸೆಮ್ ನಯೀಮ್ ಆರೋಪಿಸಿದ್ದಾರೆ.
ಒತ್ತೆಯಾಳು ವಿನಿಮಯ ಮತ್ತು ಇಸ್ರೇಲ್ ಪಡೆಯ ವಾಪಸಾತಿ ಈ ಎರಡು ವಿಷಯಗಳು ಮಾತುಕತೆಗೆ ಎದುರಾದ ಅಡಚಣೆಯಾಗಿದೆ. ಈ ಬಗ್ಗೆ ಹಮಸ್ ಎರಡು ಪ್ರಸ್ತಾಪಗಳನ್ನು ಮುಂದಿರಿಸಿತ್ತು. ಆದರೆ ಇಸ್ರೇಲ್ ಮತ್ತು ಅಮೆರಿಕ ಇದನ್ನು ನಿರ್ಲಕ್ಷಿಸಿವೆ ಎಂದವರು ಹೇಳಿದ್ದಾರೆ.
Next Story





