ಸೌದಿ ಅರೇಬಿಯಾ ಮೇಲೆ ಹೌದಿಗಳ ಕ್ಷಿಪಣಿ ದಾಳಿ: ವರದಿ

ಸಾಂದರ್ಭಿಕ ಚಿತ್ರ | Photo Credit : AP
ಸನಾ, ಜು.25: ಮಧ್ಯಪ್ರಾಚ್ಯದಲ್ಲಿ ಯುದ್ಧ ವಿಸ್ತರಿಸುತ್ತಿರುವಂತೆಯೇ ಇರಾನ್ ಬೆಂಬಲಿತ ಹೌದಿ ಬಂಡುಕೋರರು ಸೌದಿ ಅರೇಬಿಯಾ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ ಪ್ರತಿಪಾದಿಸಿದ್ದಾರೆ.
ಕೆಂಪು ಸಮುದ್ರದ ದಂಡೆಯಲ್ಲಿರುವ ಸೌದಿಯ ದಕ್ಷಿಣ ನಗರ ಜಿಝಾನ್ ನಲ್ಲಿ ಕ್ಷಿಪಣಿ ದಾಳಿಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೌದಿಗಳ ‘ಅನ್ಸಾರೊಲ್ಲಾ’ ಮಾಧ್ಯಮ ಶನಿವಾರ ತಿಳಿಸಿದೆ.
ವಿಶ್ವದ ಪ್ರಮುಖ ತೈಲ ಉತ್ಪಾದಕ ದೇಶವಾದ ಸೌದಿ ವಿರುದ್ಧ ಹೌದಿ ಗುಂಪು ಸಮುದ್ರ ದಿಗ್ಬಂಧನ ಘೋಷಿಸಿ, ಅದರ ಹಡಗುಗಳ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಸೌದಿ ಅರೇಬಿಯಾ ಶುಕ್ರವಾರ ತಡರಾತ್ರಿ ಹುದೈದಾದಲ್ಲಿರುವ ಹೌದಿ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದ್ದು, ಇಬ್ಬರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಫೆಬ್ರವರಿಯಲ್ಲಿ ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿಯ ಬಳಿಕ ಇಡೀ ಪ್ರದೇಶಕ್ಕೆ ಹರಡಿರುವ ಯುದ್ಧವು, ಈಗ ಹೊಸ ಸ್ವರೂಪ ಪಡೆದುಕೊಂಡಿದೆ.
Next Story




