ಯಮನ್ನಲ್ಲಿ ವಿಶ್ವಸಂಸ್ಥೆ ಕಚೇರಿಗೆ ನುಗ್ಗಿ ಸಿಬ್ಬಂದಿಗಳನ್ನು ವಶಕ್ಕೆ ಪಡೆದ ಹೌದಿಗಳು: ವರದಿ

ಸಾಂದರ್ಭಿಕ ಚಿತ್ರ (PC : indiatoday)
ಸನಾ, ಸೆ.1: ಯಮನ್ ರಾಜಧಾನಿ ಸನಾದಲ್ಲಿ ರವಿವಾರ ವಿಶ್ವಸಂಸ್ಥೆಯ ಎರಡು ಏಜೆನ್ಸಿಗಳ ಕಚೇರಿಗೆ ನುಗ್ಗಿದ ಹೌದಿ ಬಂಡುಕೋರರು ಸಿಬ್ಬಂದಿಗಳನ್ನು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ರವಿವಾರ ಬೆಳಿಗ್ಗೆ `ಸ್ಥಳೀಯ ಭದ್ರತಾ ಪಡೆಗಳು' ವಿಶ್ವ ಆಹಾರ ಯೋಜನೆ(ಡಬ್ಲ್ಯೂಎಫ್ಪಿ) ಮತ್ತು ಯುನಿಸೆಫ್ನ ಕಚೇರಿಗಳನ್ನು ಪ್ರವೇಶಿಸಿದ್ದು ಹಲವು ಸಿಬ್ಬಂದಿಗಳನ್ನು ವಶಕ್ಕೆ ಪಡೆದಿವೆ ಎಂದು ಯುನಿಸೆಫ್ ವಕ್ತಾರರನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ.
ಹೌದಿ ಪಡೆಗಳು ವಿಶ್ವಸಂಸ್ಥೆ ಏಜೆನ್ಸಿಗಳ ಕನಿಷ್ಠ 11 ಸಿಬ್ಬಂದಿಗಳನ್ನು ಬಂಧಿಸಿದ್ದಾರೆ ಎಂದು ಯೆಮನ್ ಗೆ ವಿಶ್ವಸಂಸ್ಥೆ ವಿಶೇಷ ಪ್ರತಿನಿಧಿ ಹ್ಯಾನ್ಸ್ ಗ್ರಂಡ್ಬರ್ಗ್ ಹೇಳಿದ್ದಾರೆ. ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಗುಟೆರಸ್ ಘಟನೆಯನ್ನು ಬಲವಾಗಿ ಖಂಡಿಸಿರುವುದಾಗಿ ವರದಿಯಾಗಿದೆ.
Next Story





