ಇರಾನ್ನಲ್ಲಿ 800 ಮರಣದಂಡನೆ ತಡೆದಿದ್ದೇನೆ: ಟ್ರಂಪ್

ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್: ಇರಾನ್ನಲ್ಲಿ ಇತ್ತೀಚೆಗೆ ನಡೆದ ಆಡಳಿತ ವಿರೋಧಿ ಪ್ರತಿಭಟನೆ ವೇಳೆ ಬಂಧಿತರಾಗಿದ್ದ ನೂರಾರು ಮಂದಿಯನ್ನು ಗಲ್ಲಿಗೇರಿಸದಂತೆ ತಾನು ತಡೆದಿದ್ದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ. ಈ ನಡೆಗಾಗಿ ಇರಾನ್ ಆಡಳಿತಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಒಂದು ದಿನ ಹಿಂದೆ ನಡೆಯಬೇಕಿದ್ದ ಗಲ್ಲುಶಿಕ್ಷೆಗಳನ್ನು ತಡೆದಿದ್ದೇನೆ ಎಂದು ತಮ್ಮ ಟ್ರುಥ್ ಸೋಶಿಯಲ್ ಪ್ಲಾಟ್ಫಾರಂ ಪೋಸ್ಟ್ ನಲ್ಲಿ ಹೇಳಿದ್ದಾರೆ. "ನಿನ್ನೆ ನಿಗದಿಯಾಗಿದ್ದ ಎಲ್ಲ 800 ಪ್ರತಿಭಟನಾಕಾರರ ಗಲ್ಲಿಗೇರಿಸುವಿಕೆಯನ್ನು ರದ್ದುಪಡಿಸಲಾಗಿದೆ ಎಂಬ ಅಂಶವನ್ನು ನಾನು ಗೌರವಿಸುತ್ತೇನೆ ಹಾಗೂ ಇದಕ್ಕಾಗಿ ಇರಾನ್ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ" ಎಂದು ವಿವರಿಸಿದ್ದಾರೆ.
ಇರಾನ್ನಲ್ಲಿ ಪ್ರತಿಭಟನಾಕಾರರ ಬಂಧನ ಹಾಗೂ ಅವರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆತಂಕಗಳು ವ್ಯಕ್ತವಾಗಿರುವ ನಡುವೆಯೇ ಟ್ರಂಪ್ ಅವರ ಹೇಳಿಕೆ ಹೊರಬಿದ್ದಿದೆ.
ಏತನ್ಮಧ್ಯೆ ಪ್ರತಿಭಟನಾಕಾರರನ್ನು ನೇಣುಗಂಬಕ್ಕೇರಿಸುವುದನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಇರಾನ್ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳುವ ಸಾಧ್ಯತೆಗಳು ಕ್ಷೀಣಿಸುತ್ತಿವೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.





