'ನನ್ನ ಕೆಲವು ಪೋಸ್ಟ್ಗಳಿಗೆ ವಿಷಾದಿಸುತ್ತೇನೆ' : ಟ್ರಂಪ್ ಜೊತೆಗಿನ ಜಟಾಪಟಿ ಬಗ್ಗೆ ಎಲಾನ್ ಮಸ್ಕ್ ಪ್ರತಿಕ್ರಿಯೆ

ಎಲಾನ್ ಮಸ್ಕ್ , ಡೊನಾಲ್ಡ್ ಟ್ರಂಪ್ | PTI
ವಾಶಿಂಗ್ಟನ್ : 'ನನ್ನ ಕೆಲವು ಪೋಸ್ಟ್ಗಳಿಗೆ ವಿಷಾದಿಸುತ್ತೇನೆ' ಎಂದು ಟ್ರಂಪ್ ಜೊತೆಗಿನ ಜಟಾಪಟಿ ಬಗ್ಗೆ ಬಿಲಿಯನೇರ್ ಎಲಾನ್ ಮಸ್ಕ್ ವಿಷಾದವನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಎಲಾನ್ ಮಸ್ಕ್, ಕಳೆದ ವಾರ ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ಮಾಡಿರುವ ಕೆಲವು ಪೋಸ್ಟ್ಗಳಿಗೆ ನಾನು ವಿಷಾದಿಸುತ್ತೇನೆ. ಅವರು ಬಹಳ ದೂರ ಹೋದರು ಎಂದು ಅವರು ಎಕ್ಸ್ನಲ್ಲಿ ಬರೆದಿದ್ದಾರೆ.
ಲೈಂಗಿಕ ಕಾರ್ಯಕರ್ತೆ ಜೆಫ್ರಿ ಎಪ್ಸ್ಟೀನ್ ಕಡತಗಳಲ್ಲಿ ಡೊನಾಲ್ಡ್ ಟ್ರಂಪ್ ಹೆಸರಿರುವುದರಿಂದ, ಈ ಕಡತಗಳನ್ನು ಸಾರ್ವಜನಿಕಗೊಳಿಸಿಲ್ಲ ಎಂದು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಆರೋಪಿಸಿದ್ದರು. ಆ ಬಳಿಕ ಟ್ರಂಪ್ ಮತ್ತು ಎಲಾನ್ ಮಸ್ಕ್ ನಡುವಿನ ಜಟಾಪಟಿ ತಾರಕಕ್ಕೇರಿತ್ತು. ಕೊನೆಗೆ ತಾನು ಮಾಡಿರುವ ಪೋಸ್ಟ್ನ್ನು ಎಲಾನ್ ಮಸ್ಕ್ ಅಳಿಸಿ ಹಾಕಿದ್ದರು.
Next Story