ಪಿಒಕೆ ಪ್ರಧಾನಿಯಾಗಲು ಬಯಸುತ್ತೇನೆ: ನವಾಜ್ ಶರೀಫ್

ನವಾಜ್ ಶರೀಫ್ | Photo Credit ; PTI
ಕರಾಚಿ, ಜು.23: ಸರಕಾರದ ವಿರುದ್ಧದ ಪ್ರತಿಭಟನೆಗಳಿಂದಾಗಿ ನಿರಂತರವಾಗಿ ಕಂಗೆಟ್ಟಿರುವ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಪ್ರಧಾನಿಯಾಗಲು ತಾವು ಬಯಸುತ್ತಿರುವುದಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಹೇಳಿದ್ದಾರೆ.
ಪಿಒಕೆ ರಾಜಧಾನಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪಾಕಿಸ್ತಾನದ ಪ್ರಸ್ತುತ ಪ್ರಧಾನಿ ಶಹಬಾಜ್ ಶರೀಫ್ ಅವರ ಹಿರಿಯ ಸಹೋದರರಾಗಿರುವ ನವಾಜ್ ಶರೀಫ್, `ಇದು ನನ್ನ ಎರಡನೇ ಮನೆ. ನನ್ನ ಪೂರ್ವಜರು ಕಾಶ್ಮೀರದಿಂದ ವಲಸೆ ಬಂದವರು. ನಮ್ಮ ಪಕ್ಷ ಗೆದ್ದರೆ, ನಾನು ಪ್ರದೇಶದ ಅಭಿವೃದ್ಧಿಯನ್ನು ಖುದ್ದು ನೋಡಿಕೊಳ್ಳಲು ನನ್ನನ್ನು ಕಾಶ್ಮೀರದ (ಪಿಒಕೆ) ಪ್ರಧಾನಿಯನ್ನಾಗಿ ಮಾಡುವಂತೆ ಪ್ರಧಾನಿ ಶಹಬಾಜ್ ಶರೀಫ್ ಅವರಲ್ಲಿ ಕೇಳಿಕೊಳ್ಳುತ್ತೇನೆ' ಎಂದು ಹೇಳಿರುವುದಾಗಿ ವರದಿಯಾಗಿದೆ.
Next Story




