ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ನ ಮುಖ್ಯ ಪ್ರಾಸಿಕ್ಯೂಟರ್ ಕರೀಮ್ ಖಾನ್ ವಜಾ

ಕರೀಮ್ ಖಾನ್ | Photo Credit : x
ನ್ಯೂಯಾರ್ಕ್, ಜು.25: ಮಾಜಿ ಮಹಿಳಾ ಸಿಬ್ಬಂದಿಯ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪಗಳ ಹಿನ್ನೆಲೆಯಲ್ಲಿ, ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ತನ್ನ ಮುಖ್ಯ ಪ್ರಾಸಿಕ್ಯೂಟರ್ ಕರೀಮ್ ಖಾನ್ ಅವರನ್ನು ವಜಾಗೊಳಿಸಿದೆ. ಸದಸ್ಯ ರಾಷ್ಟ್ರಗಳು ಮತ ಚಲಾಯಿಸುವ ಮೂಲಕ ಈ ನಿರ್ಧಾರವನ್ನು ಕೈಗೊಂಡಿವೆ.
56 ವರ್ಷದ ಖಾನ್ ಅವರನ್ನು ಕಳೆದ ತಿಂಗಳು ಅಮಾನತುಗೊಳಿಸಲಾಗಿತ್ತು. ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ, ಐಸಿಸಿಯ 125 ಸದಸ್ಯ ರಾಷ್ಟ್ರಗಳ ಪೈಕಿ 82 ರಾಷ್ಟ್ರಗಳು ‘ಗಂಭೀರ ದುರ್ನಡತೆ ಮತ್ತು ಕರ್ತವ್ಯ ಲೋಪ’ಕ್ಕಾಗಿ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಮತ ಚಲಾಯಿಸಿದವು.
ಲಭ್ಯವಿರುವ ಎಲ್ಲಾ ಕಾನೂನು ಮಾರ್ಗಗಳ ಮೂಲಕ ಈ ನಿರ್ಧಾರದ ಕಾನೂನುಬದ್ಧತೆ ಮತ್ತು ನ್ಯಾಯಸಮ್ಮತತೆಯನ್ನು ಪ್ರಶ್ನಿಸುವುದಾಗಿ ಖಾನ್ ಅವರ ಪರ ವಕೀಲರು ತಿಳಿಸಿದ್ದಾರೆ.
Next Story




