ಸೂಡಾನ್ ನ ನೂತನ ಪ್ರಧಾನಿಯಾಗಿ ಇದ್ರಿಸ್ ನೇಮಕ

ಕಾಮಿಲ್ ಅಲ್ ತೈಬ್ ಇದ್ರಿಸ್ | PC : X \ @RadioOneSS
ಖಾರ್ತೊಮ್: ಎರಡು ವರ್ಷಗಳಿಂದ ಭೀಕರ ಅಂತರ್ಯುದ್ಧಕ್ಕೆ ಸಾಕ್ಷಿಯಾಗಿರುವ ಸೂಡಾನ್ ನ ನೂತನ ಪ್ರಧಾನಿಯಾಗಿ ಕಾಮಿಲ್ ಅಲ್ ತೈಬ್ ಇದ್ರಿಸ್ ಅವರನ್ನು ಸೇನಾವರಿಷ್ಠರು ನೇಮಿಸಿದ್ದಾರೆ.
ಕಳೆದ ಕೆಲವು ತಿಂಗಳಲ್ಲಿ ಅರೆಸೈನಿಕ ಪಡೆಗಳ ವಿರುದ್ಧ ಸೇನಾಪಡೆಗಳು ಸ್ಥಿರವಾಗಿ ಮುನ್ನಡೆಯನ್ನು ಸಾಧಿಸುತ್ತಾ ಬಂದಿವೆ.
ನೂತನ ಪ್ರಧಾನಿ ಕಾಮಿಲ್ ಅಲ್-ತಯಿಬ್ ಇದ್ರಿಸ್ ಅವರಿಗೆ ದೇಶದ ಪರಿವರ್ತನಾ ಸರಕಾರವನ್ನು ರಚಿಸುವ ಹೊಣೆಯನ್ನು ವಹಿಸಲಾಗಿದೆ. ಮಾರ್ಚ್ ನಲ್ಲಿ ಅರೆಸೈನಿಕ ಪಡೆಯಾದ ಕ್ಷಿಪ್ರ ನೆರವು ದಳವನ್ನು ಸೇನಾಪಡೆಗಳು ಹೊರದಬ್ಬುವ ಮೂಲಕ ಸೇನಾಪಡೆಗಳು ರಾಜಧಾನಿ ಖಾರ್ತೂಮ್ ಮೇಲಿನ ನಿಯಂತ್ರಣವನ್ನು ಮರುಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದವು.
Next Story





