ಸಂಘರ್ಷ ಪುನರಾರಂಭವಾದರೆ, ಶತ್ರುಗಳಿಗೆ ಬಲವಾದ ಹೊಡೆತ ನೀಡುತ್ತೇವೆ: IRGC ಎಚ್ಚರಿಕೆ

ಸಾಂದರ್ಭಿಕ ಚಿತ್ರ | Photo Credit : AP , PTI
ಟೆಹ್ರಾನ್: ಅಮೆರಿಕ- ಇರಾನ್ ನಡುವಿನ ಕದನ ವಿರಾಮ ಮಾತುಕತೆ ಬಗ್ಗೆ ಅನಿಶ್ಚಿತತೆ ಉಂಟಾಗಿರುವ ಮಧ್ಯೆ ಸಂಘರ್ಷ ಪುನರಾರಂಭವಾದರೆ, ಶತ್ರುಗಳಿಗೆ ಬಲವಾದ ಹೊಡೆತವನ್ನು ನೀಡುವುದಾಗಿ ಇರಾನ್ನ IRGC ಎಚ್ಚರಿಸಿದೆ.
ಶತ್ರುಗಳ ಯಾವುದೇ ಹೊಸ ಆಕ್ರಮಣವನ್ನು ಎದುರಿಸಲು ಸಿದ್ಧವಿರುವುದಾಗಿ IRGC ಹೇಳಿದೆ. ಯುದ್ಧ ಮತ್ತೆ ಮುಂದುವರಿದರೆ "ಶತ್ರು ಸ್ವತ್ತುಗಳ"ಮೇಲೆ ತೀವ್ರ ದಾಳಿ ನಡೆಸಲಾಗುವುದು ಎಂದು IRGC ತಿಳಿಸಿರುವ ಬಗ್ಗೆ ಇರಾನ್ನ Mehr news agency ವರದಿ ಮಾಡಿದೆ
"ಯುದ್ಧಭೂಮಿ ನಿಶ್ಯಬ್ಧʼವಾಗಿರುವ ಸಮಯದಲ್ಲಿ ಮತ್ತು ಕದನ ವಿರಾಮದ ವೇಳೆ ಶತ್ರುಗಳ ಕ್ರಮಗಳನ್ನು ಮೇಲ್ವಿಚಾರಣೆ ಮಾಡುವ ಅಗತ್ಯವನ್ನು IRGC ಒತ್ತಿ ಹೇಳಿದೆ.
Next Story




