ಅಮೆರಿಕ ಪ್ರತಿನಿಧಿ ಸಭೆಗೆ ಇಲ್ಹಾನ್ ಉಮರ್ ಮರು ಆಯ್ಕೆ

ಇಲ್ಹಾನ್ ಉಮರ್ (Photo: AP)
ಮಿನೆಸೋಟ: ಅಮೆರಿಕದ ಮಿನೆಸೋಟ ರಾಜ್ಯದ 5ನೇ ಕಾಂಗ್ರೆಷನಲ್ ಜಿಲ್ಲೆಯಿಂದ ಡೆಮಾಕ್ರಟಿಕ್ ಪಕ್ಷದ ಇಲ್ಹಾನ್ ಉಮರ್ ಅವರು ಅಮೆರಿಕದ ಪ್ರತಿನಿಧಿ ಸಭೆಗೆ (ಯುಎಸ್ ಹೌಸ್) ಮರು ಆಯ್ಕೆಯಾಗಿದ್ದಾರೆ.
ಇದೇ ವೇಳೆ, ಉಮರ್ ಅವರ ವಿರುದ್ಧದ ಗುರುತಿನ ವಂಚನೆ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ. ನ್ಯಾಯಾಲಯಕ್ಕೆ ಸಲ್ಲಿಸಲಾದ ದಾಖಲೆಯೊಂದರಲ್ಲಿ ಮಿನೆಸೋಟದ ಈ ರಾಜಕಾರಣಿಯ ಹೆಸರಿನೊಂದಿಗೆ ಮತ್ತೊಂದು ಹೆಸರೂ ಉಲ್ಲೇಖವಾಗಿದೆ. ಇದು ಗುರುತಿನ ವಂಚನೆಗೆ ಸಂಬಂಧಿಸಿದ ಆರೋಪಗಳ ಕುರಿತು ಮತ್ತೆ ಚರ್ಚೆ ಹುಟ್ಟುಹಾಕಿದೆ.
ಈ ಆರೋಪಗಳ ಹಿನ್ನೆಲೆಯಲ್ಲಿ ಇಲ್ಹಾನ್ ಉಮರ್ ಅವರು ಕಾಂಗ್ರೆಸ್ ನಿಂದ ರಾಜೀನಾಮೆ ನೀಡಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಆಗ್ರಹಿಸಿದ್ದರು. ಆರೋಪಗಳ ವಿವಾದದ ನಡುವೆಯೇ ಉಮರ್ ಅವರು ಪ್ರತಿನಿಧಿ ಸಭೆಗೆ ಮರು ಆಯ್ಕೆಯಾಗಿದ್ದಾರೆ.
Next Story




