ರಶ್ಯ-ಉಕ್ರೇನ್ ಶಾಂತಿ ಪ್ರಯತ್ನಗಳಿಗೆ ಬೆಂಬಲ ನೀಡಲು ಸಿದ್ಧ : ಭಾರತ

ಎಸ್. ಜೈಶಂಕರ್ | Photo Credit : PTI
ಕೀವ್: ರಶ್ಯ-ಉಕ್ರೇನ್ ಯುದ್ಧವನ್ನು ಅಂತ್ಯಗೊಳಿಸಲು ಮಧ್ಯಸ್ಥಿಕೆ ಸೇರಿದಂತೆ ಯಾವುದೇ ರೀತಿಯಲ್ಲಿ ನೆರವಾಗಲು ಭಾರತ ಸಿದ್ಧವಾಗಿದೆ ಎಂದು ಉಕ್ರೇನ್ಗೆ ನೀಡಿದ ತಮ್ಮ ಅಧಿಕೃತ ಭೇಟಿಯ ವೇಳೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಗುರುವಾರ ತಿಳಿಸಿದ್ದಾರೆ.
ಉಕ್ರೇನ್ನ ವಿದೇಶಾಂಗ ಸಚಿವ ಆಂಡ್ರಿ ಸಿಬಿಹಾ ಅವರೊಂದಿಗೆ ಮಾತನಾಡಿದ ಜೈಶಂಕರ್, ಈ ಸಂಘರ್ಷವನ್ನು ಯುದ್ಧಭೂಮಿಯಲ್ಲಿ ಪರಿಹರಿಸಲು ಸಾಧ್ಯವಿಲ್ಲ ಮತ್ತು ಮಾತುಕತೆ ಹಾಗೂ ರಾಜತಾಂತ್ರಿಕತೆಯ ಮೂಲಕವೇ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬ ಭಾರತದ ನಿಲುವನ್ನು ಪುನರುಚ್ಚರಿಸಿದರು.
ಭಾರತದಿಂದ ಯಾವುದೇ ರೀತಿಯಲ್ಲಿ ಸಹಾಯ ಮಾಡಲು ಸಾಧ್ಯವಾದರೆ, ನಾವು ನೆರವಾಗಲು ಸಿದ್ಧರಿದ್ದೇವೆ. ರಶ್ಯ ಮತ್ತು ಉಕ್ರೇನ್ ಎರಡೂ ದೇಶಗಳು ಕೋರಿದರೆ ಶಾಂತಿ ಪ್ರಯತ್ನಗಳಿಗೆ ಬೆಂಬಲ ನೀಡಲು ಭಾರತ ಸಿದ್ಧ ಎಂದು ಜೈಶಂಕರ್ ಹೇಳಿದರು.
Next Story




