ಮೂರು ಒಪ್ಪಂದಗಳಿಗೆ ಭಾರತ ಮತ್ತು ಶ್ರೀಲಂಕಾ ಸಹಿ

Photo Credit: X/@rajnathsingh
ಕೊಲಂಬೊ: ರಕ್ಷಣಾ ಹಾಗೂ ಸಾಂಸ್ಥಿಕ ಸಹಕಾರವನ್ನು ಬಲಪಡಿಸಲು ಭಾರತ ಮತ್ತು ಶ್ರೀಲಂಕಾ ದೇಶಗಳು ಬುಧವಾರ ಕೊಲಂಬೊದಲ್ಲಿ ಭಾರತದ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಹಾಗೂ ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಅವರ ನಡುವೆ ನಡೆದ ಸಭೆಯಲ್ಲಿ ಮೂರು ಹೊಸ ಒಪ್ಪಂದಗಳಿಗೆ ಸಹಿ ಹಾಕಿವೆ ಎಂದು ಶ್ರೀಲಂಕಾ ಅಧ್ಯಕ್ಷರ ಕಚೇರಿಯ ಪ್ರಕಟಣೆ ತಿಳಿಸಿದೆ.
ಶ್ರೀಲಂಕಾ ವಾಯುಪಡೆಯ ಎಲ್70 ಗನ್ ವ್ಯವಸ್ಥೆಗಳ ಆಧುನೀಕರಣ ಮತ್ತು ಮೇಲ್ದರ್ಜೆಗೇರಿಸುವಿಕೆ, ಭಾರತದ ನ್ಯಾಷನಲ್ ಡಿಫೆನ್ಸ್ ಕಾಲೇಜ್ ಮತ್ತು ಶ್ರೀಲಂಕಾದ ನ್ಯಾಷನಲ್ ಡಿಫೆನ್ಸ್ ಕಾಲೇಜ್ ನಡುವಿನ ಶೈಕ್ಷಣಿಕ ಸಹಕಾರ ಹಾಗೂ ಶ್ರೀಲಂಕಾ ಕೆಡೆಟ್ ಕಾಪ್ರ್ಸ್ ಮತ್ತು ಭಾರತೀಯ ಕೆಡೆಟ್ ಕಾಪ್ರ್ಸ್ ನಡುವಿನ ದ್ವಿಪಕ್ಷೀಯ ಸಹಕಾರವನ್ನು ಈ ಒಪ್ಪಂದಗಳು ಒಳಗೊಂಡಿವೆ. 38 ವರ್ಷಗಳ ನಂತರ ಭಾರತದ ರಕ್ಷಣಾ ಸಚಿವರೊಬ್ಬರು ಈ ದೇಶಕ್ಕೆ ನೀಡಿರುವ ಮೊದಲ ಭೇಟಿ ಇದಾಗಿದೆ.
Next Story




