ಸ್ಪೀಕರ್ ಯು.ಟಿ. ಖಾದರ್‌ರನ್ನು ಭೇಟಿ ಮಾಡಿದ ಪೋರ್ಚುಗಲ್‌ಗೆ ಭಾರತದ ರಾಯಭಾರಿ ಪುನೀತ್ ಆರ್ ಕುಂದಲ್

ಹೊಸದಿಲ್ಲಿ: ಅಂತರಾಷ್ಟ್ರೀಯ ಸ್ಪೀಕರ್ ಸಮಾವೇಶದಲ್ಲಿ ಭಾಗವಹಿಸಲು ಪೋರ್ಚುಗಲ್ ಗೆ ಭೇಟಿ ನೀಡಿರುವ ಕರ್ನಾಟಕ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಪೋರ್ಚುಗಲ್‌ಗೆ ಭಾರತದ ರಾಯಭಾರಿ ಪುನೀತ್ ಆರ್ ಕುಂದಲ್ ಅವರು ಭೇಟಿ ಮಾಡಿ ಮಾತುಕತೆ ನಡೆಸಿದರು.
ಪೋರ್ಚುಗಲ್ ದೇಶವು ಕರಾವಳಿ ಅರಬ್ಬೀ ಸಮುದ್ರವನ್ನು ಆವರಿಸಿಕೊಂಡಂತೆ ಅಟ್ಲಾಂಟಿಕ್ ಮಹಾ ಸಾಗರವನ್ನು ಆವರಿಸಿಕೊಂಡಿದೆ. ಇಲ್ಲಿ ಪ್ರವಾಸೋದ್ಯಮ ಪ್ರಮುಖ ಆಕರ್ಷಣೆಯಾಗಿದ್ದು ನಮ್ಮ ಕರಾವಳಿಯಲ್ಲಿ ಕೂಡಾ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು ಎಂದು ಸ್ಪೀಕರ್ ಯು.ಟಿ. ಖಾದರ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story







