ಜಾತಿ ತಾರತಮ್ಯ ವಿರೋಧಿ ಮಸೂದೆಗೆ ತಡೆ ತರುವಂತೆ ಕ್ಯಾಲಿಫೋರ್ನಿಯಾ ಗವರ್ನರ್ ಗೆ ಭಾರತೀಯ-ಅಮೆರಿಕನ್ನರ ಆಗ್ರಹ

ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್, Photo:x
ನ್ಯೂಯಾರ್ಕ್: ಇತ್ತೀಚೆಗೆ ರಾಜ್ಯ ಅಸೆಂಬ್ಲಿಅಂಗೀಕರಿಸಿದ ಜಾತಿ ತಾರತಮ್ಯ ವಿರೋಧಿ ಮಸೂದೆಗೆ ತಡೆ ತರುವಂತೆ ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್ ಅವರನ್ನು ಆಗ್ರಹಿಸಿರುವ ಹಲವಾರು ಭಾರತೀಯ-ಅಮೆರಿಕನ್ನರು ರಾಜ್ಯ ರಾಜಧಾನಿ ಸ್ಯಾಕ್ರಮೆಂಟೊದಲ್ಲಿ ಶಾಂತಿಯುತ ಪ್ರತಿಭಟನಾ ರ್ಯಾಲಿಯನ್ನು ನಡೆಸಿದರು.
ಈ ಮಸೂದೆಯು ಭಾರತೀಯರನ್ನು ನಿರ್ದಿಷ್ಟವಾಗಿ ಹಿಂದೂಗಳನ್ನು ಗುರಿಯಾಗಿಸುತ್ತದೆ ಹಾಗೂ ತಾರತಮ್ಯ ಮಾಡುತ್ತದೆ ಎಂದು ಪ್ರತಿಭಟನಕಾರರು ಪ್ರತಿಪಾದಿಸಿದರು.
"ನಾವು ಗವರ್ನರ್ ನ್ಯೂಸಮ್ ಅನ್ನು Veto SB403 ಗೆ ಕೇಳುತ್ತೇವೆ ಆದ್ದರಿಂದ ನೀವು ತಾರತಮ್ಯವನ್ನು ಹೊಂದಿಲ್ಲ ಎಂದು ಹೇಳಿರುವುದನ್ನು ಇತಿಹಾಸವು ನೆನಪಿಸುತ್ತದೆ ಎಂದು ಸ್ಟೇಟ್ ಕ್ಯಾಪಿಟಲ್ ಮುಂದೆ ನಡೆದ ಭಾರತೀಯ ಅಮೆರಿಕನ್ನರ ಸಭೆಯನ್ನುದ್ದೇಶಿಸಿ ಹಿಂದೂ ಅಮೇರಿಕನ್ ಫೌಂಡೇಶನ್ ನ ಸಮೀರ್ ಕಾರ್ಲಾ ಹೇಳಿದ್ದಾರೆ.
ವಿವಿಧ ಭಾಗಗಳಿಂದ ಜಮಾಯಿಸಿದ್ದ ಪ್ರತಿಭಟನಾಕಾರರು ಭಿತ್ತಿಪತ್ರಗಳು ಮತ್ತು ಬ್ಯಾನರ್ ಗಳನ್ನು ಪ್ರದರ್ಶಿಸಿದರು. ಈ ಮಸೂದೆ ಹಿಂದೂ ಸಮುದಾಯಕ್ಕೆ ವಿರುದ್ಧ ತಾರತಮ್ಯ ಮಾಡುವುದರಿಂದ ಮಸೂದೆಗೆ ಅಂಕಿತ ಹಾಕದಂತೆ ರಾಜ್ಯಪಾಲರನ್ನು ಒತ್ತಾಯಿಸಿದರು.