ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 30 ಭಾರತೀಯ ಚಾಲಕರ ಬಂಧನ

ಸಾಂದರ್ಭಿಕ ಚಿತ್ರ
ವಾಶಿಂಗ್ಟನ್, ಜೂ.2: ಅಮೆರಿಕದಲ್ಲಿ ವಾಣಿಜ್ಯ ಟ್ರಕ್ ಚಾಲಕರಾಗಿ ಕಾನೂನುಬಾಹಿರವಾಗಿ ಕೆಲಸ ಮಾಡುತ್ತಿದ್ದ ಸುಮಾರು 30 ಭಾರತೀಯರನ್ನು ಬಂಧಿಸಿರುವುದಾಗಿ ಅಮೆರಿಕದ ಕಸ್ಟಮ್ಸ್ ಮತ್ತು ಬೋರ್ಡರ್ ಪ್ರೊಟೆಕ್ಷನ್(ಸಿಬಿಪಿ) ಅಧಿಕಾರಿಗಳು ಹೇಳಿದ್ದಾರೆ.
ಅಮೆರಿಕದಲ್ಲಿ ಕಾನೂನುಬಾಹಿರವಾಗಿ ನೆಲೆಸಿರುವವರನ್ನು ಪತ್ತೆಹಚ್ಚುವ ಕಾರ್ಯಾಚರಣೆಯಡಿ ಅರಿಝೋನಾದ ಯುಮಾ ಸೆಕ್ಟರ್ನಲ್ಲಿ 52 ವ್ಯಕ್ತಿಗಳನ್ನು ಬಂಧಿಸಲಾಗಿದ್ದು ಇವರಲ್ಲಿ 36 ಮಂದಿ ಟ್ರಕ್ ಚಾಲಕರು. ಟ್ರಕ್ ಚಾಲಕರಲ್ಲಿ 30 ಮಂದಿ ಭಾರತೀಯರು ಸೇರಿದ್ದು ಇವರನ್ನು ಶೀಘ್ರವಾಗಿ ಗಡೀಪಾರು ಮಾಡುವ ನಿರೀಕ್ಷೆಯಿದೆ ಎಂದು ಸಿಬಿಪಿ ಮೂಲಗಳು ಹೇಳಿವೆ.
Next Story




