ಸಿಂಗಾಪುರ | ವ್ಯಕ್ತಿಯೋರ್ವನ ಮೇಲೆ ಲೈಂಗಿಕ ದೌರ್ಜನ್ಯ : ಭಾರತೀಯ ಪ್ರಜೆಗೆ ಜೈಲು ಶಿಕ್ಷೆ

ಸಾಂದರ್ಭಿಕ ಚಿತ್ರ (PTI)
ಸಿಂಗಾಪುರ : ವ್ಯಕ್ತಿಯೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಭಾರತೀಯ ಪ್ರಜೆಯೋರ್ವನಿಗೆ 14 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.
ಜೂನ್ 18ರಂದು ಸಿಂಗಾಪುರದ ರಫೆಲ್ಸ್ ಆಸ್ಪತ್ರೆಯಲ್ಲಿ ಘಟನೆ ನಡೆದಿತ್ತು. ನಾರ್ತ್ ಬ್ರಿಡ್ಜ್ ರಸ್ತೆಯಲ್ಲಿರುವ ರಫೆಲ್ಸ್ ಆಸ್ಪತ್ರೆಗೆ ತನ್ನ ತಾತನನ್ನು ಭೇಟಿಯಾಗಲು ಬಂದಿದ್ದ ಸಂತ್ರಸ್ತನ ಮೇಲೆ ಎಲಿಪೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಡೆಪ್ಯೂಟಿ ಪಬ್ಲಿಕ್ ಪ್ರಾಸಿಕ್ಯೂಟರ್ ಯುಜೀನ್ ಫುವಾ ಹೇಳಿದ್ದಾರೆ.
ಕೃತ್ಯ ಬಯಲಾಗುತ್ತಿದ್ದಂತೆ ಆತನನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿತ್ತು.
ಘಟನೆ ನಡೆದ ಎರಡು ದಿನಗಳ ಬಳಿಕ ಎಲಿಪೆಯನ್ನು ಬಂಧಿಸಲಾಗಿತ್ತು. ಶುಕ್ರವಾರ ನ್ಯಾಯಾಲಯ ಎಲಿಪೆಗೆ ಒಂದು ವರ್ಷ ಎರಡು ತಿಂಗಳು ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
Next Story





