Texas | ಹೆತ್ತವರು, ಅಜ್ಜಿಯನ್ನು ಹತ್ಯೆ ಮಾಡಿದ ಭಾರತೀಯ ಮೂಲದ ಯುವಕನ ಬಂಧನ

Photo: X/Voices and Evidence
ನ್ಯೂಯಾರ್ಕ್, ಜೂ.21: ಅಮೆರಿಕದ ಟೆಕ್ಸಾಸ್ನ ಆಲ್ಟನ್ ನಲ್ಲಿ ತನ್ನ ಹೆತ್ತವರು ಮತ್ತು ಅಜ್ಜಿಯನ್ನು ಹತ್ಯೆಗೈದ ಆರೋಪದ ಮೇಲೆ ಭಾರತೀಯ ಮೂಲದ 19 ವರ್ಷದ ಗೌರವ್ ಚೋಪ್ರಾ ಎಂಬ ಯುವಕನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ಆಲ್ಟನ್ ನಲ್ಲಿರುವ ತಮ್ಮ ಮನೆಯಲ್ಲಿ ಗೌರವ್ ತನ್ನ ಕುಟುಂಬದ ಸದಸ್ಯರ ಮೇಲೆ ಗುಂಡು ಹಾರಿಸಿ ಕಾರಿನಲ್ಲಿ ಪರಾರಿಯಾಗಿದ್ದಾನೆ. ದಾಳಿಯಲ್ಲಿ ಮೃತಪಟ್ಟ ಮೂವರನ್ನು ಗೌರವ್ ತಂದೆ ಸೀತಾರಾಮ್ (56), ತಾಯಿ ಕಮಲೇಶ್ ರಾಣಿ (46) ಮತ್ತು ಅಜ್ಜಿ ಮಿಂದರ್ ಕೌರ್ (76) ಎಂದು ಗುರುತಿಸಲಾಗಿದೆ. ಗುಂಡಿನ ದಾಳಿಯಲ್ಲಿ ಗಾಯಗೊಂಡು ಬದುಕುಳಿದ ಆತನ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಗೌರವ್ ಚಲಾಯಿಸುತ್ತಿದ್ದ ವಾಹನವನ್ನು ಬೆನ್ನಟ್ಟಿ ಆತನನ್ನು ಬಂಧಿಸುವಲ್ಲಿ ಸಫಲವಾಗಿದ್ದಾರೆ ಎಂದು ವರದಿಯಾಗಿದೆ.
Next Story




