ಮದುವೆ ಆಗಲು ಅಮೆರಿಕಕ್ಕೆ ತೆರಳಿದ್ದ ಭಾರತೀಯ ಮಹಿಳೆ ನಾಪತ್ತೆ

Photo : Facebook
ವಾಷಿಂಗ್ಟನ್: ಮದುವೆ ಆಗಲು ಅಮೆರಿಕಕ್ಕೆ ತೆರಳಿದ್ದ 24 ವರ್ಷದ ಭಾರತೀಯ ಮಹಿಳೆಯೊಬ್ಬಳು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ಮಹಿಳೆಯನ್ನು ಸಿಮ್ರಾನ್ ಎಂದು ಗುರುತಿಸಲಾಗಿದ್ದು ಈಕೆಗೆ ಅಮೆರಿಕಾದಲ್ಲಿ ಯಾರೂ ಸಂಬಂಧಿಕರು ಇರಲಿಲ್ಲ ಮತ್ತು ಇಂಗ್ಲಿಷ್ ಮಾತನಾಡಲು ಬರುತ್ತಿರಲಿಲ್ಲ. ತನ್ನ ಯೋಜಿತ ಮದುವೆಗಾಗಿ ಜೂನ್ 20ರಂದು ಅಮೆರಿಕಾಕ್ಕೆ ಆಗಮಿಸಿದ್ದ ಸಿಮ್ರಾನ್ 5 ದಿನಗಳ ಬಳಿಕ ನಾಪತ್ತೆಯಾಗಿದ್ದಾರೆ ಎಂದು `ನ್ಯೂಯಾರ್ಕ್ ಪೋಸ್ಟ್' ವರದಿ ಮಾಡಿದೆ. ತನಿಖಾಧಿಕಾರಿಗಳ ಪ್ರಕಾರ ಸಿಮ್ರಾನ್ ಗೆ ಮದುವೆಯಾಗುವ ಇಚ್ಛೆ ಇರಲಿಲ್ಲ. ಆದರೆ ಕೇವಲ ಅಮೆರಿಕಾಕ್ಕೆ ಪ್ರವಾಸ ತೆರಳಲು ಬಯಸಿದ್ದರು.
ಅಮೆರಿಕಾಕ್ಕೆ ಮದುವೆಯಾಗಲು ಬರುವ ವಧುವಿಗೆ ಉಚಿತ ಟಿಕೆಟ್ ದೊರಕುತ್ತದೆ. ಈ ಸೌಲಭ್ಯವನ್ನು ಬಳಸಿಕೊಂಡು ಅಮೆರಿಕಾಕ್ಕೆ ಭೇಟಿ ನೀಡುವ ಉದ್ದೇಶ ಸಿಮ್ರಾನ್ ಗೆ ಇದ್ದಿರಬಹುದು ಎಂದು ಊಹಿಸಲಾಗಿದೆ. ಭಾರತದಲ್ಲಿ ಈಕೆಯ ಸಂಬಂಧಿಕರ ಬಗ್ಗೆ ಮಾಹಿತಿ ದೊರಕಿಲ್ಲ. ಸಿಸಿ ಕ್ಯಾಮೆರಾದ ವೀಡಿಯೊಗಳನ್ನು ಆಧರಿಸಿ, ಆಕೆಯ ಪಾಸ್ಪೋರ್ಟ್ ನ ಮಾಹಿತಿಗಳಿಂದ ಆಕೆಯ ಫೋಟೋ ಹಾಗೂ ಇತರ ಮಾಹಿತಿಗಳನ್ನು ಸಂಗ್ರಹಿಸಲಾಗಿದ್ದು ನ್ಯೂಜೆರ್ಸಿ ಪೊಲೀಸರು ತನಿಖಾ ಕಾರ್ಯ ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ.





