ಗಾಝಾ ಯುದ್ಧ ಹಿನ್ನೆಲೆ: ಇಸ್ರೇಲ್ ಜಿಮ್ನಾಸಿಸ್ಟ್ ಗಳಿಗೆ ವೀಸಾ ನಿರಾಕರಿಸಿದ ಇಂಡೋನೇಶ್ಯ

ಸಾಂದರ್ಭಿಕ ಚಿತ್ರ (Image by freepik)
ಜಕಾರ್ತಾ: ಗಾಝಾ ಮೇಲೆ ಇಸ್ರೇಲ್ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಈ ತಿಂಗಳು ಜಕಾರ್ತಾದಲ್ಲಿ ಪ್ರಾರಂಭಗೊಳ್ಳಯಲಿರುವ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಬೇಕಿದ್ದ ಇಸ್ರೇಲ್ ಜಿಮ್ನಾಸಿಸ್ಟ್ ಗಳಿಗೆ ಇಂಡೋನೇಶ್ಯ ವೀಸಾ ನಿರಾಕರಿಸಿದೆ ಎಂದು ಶುಕ್ರವಾರ ಇಂಡೋನೇಶ್ಯದ ಕ್ರೀಡಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂಡೋನೇಶ್ಯದಲ್ಲಿ ಅಕ್ಟೋಬರ್ 19ರಿಂದ 25ರವರೆಗೆ ನಡೆಯಲಿರುವ ವರ್ಲ್ಡ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಇಸ್ರೇಲ್ ತಂಡ ಸಿದ್ಧವಾಗಿತ್ತು. ಆದರೆ, “ಅವರಿಗೆ ಭಾಗವಹಿಸದಂತೆ ಸೂಚಿಸಲಾಗಿದೆ” ಎಂದು ಇಂಡೋನೇಶ್ಯ ಜಿಮ್ನಾಸ್ಟಿಕ್ಸ್ ಫೆಡರೇಷನ್ ನ ಮುಖ್ಯಸ್ಥೆ ಇಟಾ ಜುಲೈಟಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆದರೆ, ಈ ಕುರಿತು ಇಸ್ರೇಲ್ ಜಿಮ್ನಾಸ್ಟಿಕ್ಸ್ ಫೆಡರೇಷನ್ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Next Story





