Indonesia | ಚಿನ್ನದ ಗಣಿಗೆ ನೀರು ನುಗ್ಗಿ 6 ಮಂದಿ ಮೃತ್ಯು

Photo Credit : AP
ಜಕಾರ್ತಾ: ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತದ ಬೊಗೊರ್ ರೀಜೆನ್ಸಿಯಲ್ಲಿರುವ ಚಿನ್ನದ ಗಣಿಯೊಂದರಲ್ಲಿ ಕಾರ್ಮಿಕರು ಚಿನ್ನದ ಕಣಗಳಿಗಾಗಿ ಅಗೆಯುತ್ತಿದ್ದಾಗ, ಭಾರಿ ಮಳೆಯಿಂದಾಗಿ ಸಮೀಪದ ಸಿಸೆಯುರೆಹ್ ನದಿ ಉಕ್ಕಿ ಹರಿದು ಗಣಿಯ ಸುರಂಗಕ್ಕೆ ನೀರು ನುಗ್ಗಿದ್ದು ಕನಿಷ್ಠ ಆರು ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಗಣಿಯ ಒಳಗೆ ಸಿಲುಕಿದ್ದಾರೆ ಎಂದು ಶಂಕಿಸಲಾಗಿರುವ ಇತರ 20 ಗಣಿ ಕಾರ್ಮಿಕರಿಗಾಗಿ ಶೋಧ ಮುಂದುವರಿಸಿದ್ದಾರೆ. ಗಣಿಯ ಸುರಂಗಕ್ಕೆ ಪ್ರವಾಹದ ನೀರು ತುಂಬುವ ಮೊದಲೇ ಹನ್ನೊಂದು ಕಾರ್ಮಿಕರು ಪಾರಾಗಿದ್ದಾರೆ. ರಾಜಧಾನಿ ಜಕಾರ್ತಾದ ದಕ್ಷಿಣಕ್ಕಿರುವ ಪರ್ವತ ಪ್ರದೇಶದಲ್ಲಿರುವ ಈ ಸುರಂಗವು ಸುಮಾರು 330 ಅಡಿ ಆಳವಿದೆ. ಗಣಿ ಕಾರ್ಮಿಕರು ಅಕ್ರಮವಾಗಿ ಕೆಲಸ ಮಾಡುತ್ತಿದ್ದ ಕಾರಣ ತಕ್ಷಣವೇ ಮಾಹಿತಿ ನೀಡಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story




