ಇಂಡೋನೇಶ್ಯಾ| ಜಕಾರ್ತದ ಬಳಿ ರೈಲುಗಳು ಮುಖಾಮುಖಿ ಢಿಕ್ಕಿ: 15 ಮಂದಿ ಮೃತ್ಯು, 88 ಜನರಿಗೆ ಗಾಯ

Photo Credit : AP
ಜಕಾರ್ತ, ಎ.28: ಇಂಡೊನೇಶ್ಯಾದ ರಾಜಧಾನಿ ಜಕಾರ್ತದ ಬಳಿ ರೈಲುಗಳು ಮುಖಾಮುಖಿ ಢಿಕ್ಕಿಯಾಗಿದ್ದು ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ. ಇತರ 88 ಮಂದಿ ಗಾಯಗೊಂಡಿರುವುದಾಗಿ ಸರಕಾರದ ಮೂಲಗಳು ಮಂಗಳವಾರ ಹೇಳಿವೆ.
ಸೋಮವಾರ ತಡರಾತ್ರಿ ಜಕಾರ್ತದ ಹೊರವಲಯದ ಬೆಕಾಸಿ ನಗರದಲ್ಲಿ ಪ್ರಯಾಣಿಕ ರೈಲುಗಳ ನಡುವೆ ಢಿಕ್ಕಿ ಸಂಭವಿಸಿದೆ. ಮಹಿಳೆಯರಿಗೆ ಮೀಸಲಾದ ಬೋಗಿ ಸಂಪೂರ್ಣ ಹಾನಿಗೊಂಡಿದ್ದು ಮೃತರು ಮತ್ತು ಗಾಯಗೊಂಡವರಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಪ್ಪಚ್ಚಿಯಾಗಿದ್ದ ಬೋಗಿಗಳ ನಡುವೆ ಸಿಕ್ಕಿಬಿದ್ದಿದ್ದವರನ್ನು ರಕ್ಷಿಸುವುದು ಸವಾಲಿನ ಕಾರ್ಯವಾಗಿದೆ' ಎಂದು ರಕ್ಷಣಾ ತಂಡವನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
Next Story




