‘ನೆರವು ಸಮೀಪಿಸುತ್ತಿದೆ’: ಹೋರಾಟ ಮುಂದುವರಿಸಲು ಇರಾನ್ ಪ್ರತಿಭಟನಕಾರರಿಗೆ ಟ್ರಂಪ್ ಸಂದೇಶ

ಡೊನಾಲ್ಡ್ ಟ್ರಂಪ್ | Photo Credit : AP \ PTI
ವಾಶಿಂಗ್ಟನ್, ಜ.14: ಆಡಳಿತ ವಿರೋಧಿ ಪ್ರತಿಭಟನೆಯನ್ನು ಮುಂದುವರಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ನ ಪ್ರತಿಭಟನಕಾರರಿಗೆ ಮತ್ತೆ ಕರೆ ನೀಡಿದ್ದು, ‘ನೆರವು ಸಮೀಪಿಸುತ್ತಿದೆ’ ಎಂದು ಹೇಳುವ ಮೂಲಕ ಮಿಲಿಟರಿ ಕಾರ್ಯಾಚರಣೆಯ ಸುಳಿವು ನೀಡಿದ್ದಾರೆ.
ಸೋಮವಾರ ಇರಾನ್ ನಾಯಕರು ತನ್ನೊಂದಿಗೆ ರಾಜತಾಂತ್ರಿಕ ಮಾತುಕತೆಗೆ ಒಲವು ವ್ಯಕ್ತಪಡಿಸಿದ್ದಾರೆಂದು ಹೇಳಿದ್ದ ಟ್ರಂಪ್, ಇಂದು ಮತ್ತೆ ತಮ್ಮ ವರಸೆಯನ್ನು ಬದಲಾಯಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಟ್ರೂಥ್ ಸೋಶಿಯಲ್’ನಲ್ಲಿ ಪೋಸ್ಟ್ ಮಾಡಿರುವ ಅವರು,
‘‘ಇರಾನ್ನ ದೇಶಭಕ್ತರೇ, ಪ್ರತಿಭಟನೆ ನಡೆಸುತ್ತಿರಿ. ನಿಮ್ಮ ಸಂಸ್ಥೆಗಳನ್ನು ವಶಪಡಿಸಿಕೊಳ್ಳಿರಿ. ಹಂತಕರು ಹಾಗೂ ದೌರ್ಜನ್ಯ ಎಸಗಿದವರ ಹೆಸರನ್ನು ಉಳಿಸಿಕೊಳ್ಳಿರಿ. ಪ್ರತಿಭಟನಕಾರರ ವಿವೇಚನಾರಹಿತ ಹತ್ಯೆ ಕೊನೆಗೊಳ್ಳುವ ತನಕ ನಾನು ಇರಾನಿ ಅಧಿಕಾರಿಗಳೊಂದಿಗೆ ನಡೆಯುತ್ತಿದ್ದ ಮಾತುಕತೆಯನ್ನು ರದ್ದುಪಡಿಸಿದ್ದೇನೆ. ನೆರವು ಬರುತ್ತಿದೆ. ಮಿಗಾ (ಮೇಕ್ ಇರಾನ್ ಗ್ರೇಟ್ ಅಗೈನ್!!!)’’ ಎಂದು ಬರೆದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂದು ಸಹಿ ಮಾಡಿದ್ದಾರೆ.





