Iran | ʼಬಂದರ್ ಅಬ್ಬಾಸ್ʼ ನಲ್ಲಿ ಸ್ಫೋಟ: ಓರ್ವ ಮೃತ್ಯು, 14 ಜನರಿಗೆ ಗಾಯ

Photo Credit : x \ @ScharoMaroof
ಟೆಹ್ರಾನ್: ಇರಾನ್ನ ದಕ್ಷಿಣ ಬಂದರ್ ʼಬಂದರ್ ಅಬ್ಬಾಸ್ ʼನಲ್ಲಿ ಶನಿವಾರ ಸಂಭವಿಸಿದ ಸ್ಪೋಟದಲ್ಲಿ ಕನಿಷ್ಠ ಓರ್ವ ಮೃತಪಟ್ಟಿದ್ದು, 14 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಇರಾನ್ ಮಾಧ್ಯಮಗಳು ವರದಿ ಮಾಡಿದೆ.
ಸ್ಫೋಟದಲ್ಲಿ ರೆವೆಲ್ಯೂಷನರಿ ಗಾರ್ಡ್ ನೌಕಾಪಡೆಯ ಕಮಾಂಡರ್ ರನ್ನು ಗುರಿಯಾಗಿಸಲಾಗಿದೆ ಎಂಬ ಸಾಮಾಜಿಕ ಮಾಧ್ಯಮ ವರದಿಗಳು ಸಂಪೂರ್ಣವಾಗಿ ಸುಳ್ಳು ಎಂದು Tasnim ಸುದ್ದಿ ಸಂಸ್ಥೆ ತಿಳಿಸಿದೆ.
ಸ್ಫೋಟದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
Next Story





