ಇರಾನ್ನಿಂದ ಕ್ಷಿಪಣಿ ದಾಳಿ : ಇಸ್ರೇಲ್ನಲ್ಲಿ ಒಬ್ಬ ಮೃತ್ಯು

Photo Credit : aljazeera.com
ಟೆಹ್ರಾನ್, ಮಾ.9: ಇರಾನ್ನ ಕ್ಷಿಪಣಿ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಯುದ್ದದಿಂದ ಇಸ್ರೇಲ್ನಲ್ಲಿ ಮೃತರ ಸಂಖ್ಯೆ 11ಕ್ಕೇರಿರುವುದಾಗಿ ಇಸ್ರೇಲ್ ಸೋಮವಾರ ಹೇಳಿದೆ.
ಸೋಮವಾರ ಮಧ್ಯ ಇಸ್ರೇಲನ್ನು ಹಲವು ಸ್ಫೋಟಗಳು ನಡುಗಿಸಿದ್ದು ಕನಿಷ್ಠ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕ್ಷಿಪಣಿ ದಾಳಿಯಿಂದ ಹಲವು ಸ್ಥಳಗಳ ಮೇಲೆ ಪರಿಣಾಮ ಬೀರಿವೆ. ಶತ್ರುಗಳ ಬೆದರಿಕೆಯನ್ನು ತಡೆಯಲು ರಕ್ಷಣಾತ್ಮಕ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
ಈ ಮಧ್ಯೆ, ಆಯತುಲ್ಲಾ ಮೊಜ್ತಬಾ ಖಾಮಿನೈಯನ್ನು ಇರಾನ್ನ ನೂತನ ಸರ್ವೋಚ್ಛ ನಾಯಕನನ್ನಾಗಿ ನೇಮಕಗೊಳಿಸಿದ ಬಳಿಕ ಇರಾನ್ ಸೋಮವಾರ ಇಸ್ರೇಲ್ನತ್ತ ಪ್ರಥಮ ಕ್ಷಿಪಣಿ ದಾಳಿ ನಡೆಸಿರುವುದಾಗಿ ಸರಕಾರಿ ಸ್ವಾಮ್ಯದ ಐಆರ್ಐಬಿ ಟಿವಿ ವಾಹಿನಿ ವರದಿ ಮಾಡಿದೆ. ಈ ಮಧ್ಯೆ, ಯುದ್ದದ 10ನೇ ದಿನವಾದ ಸೋಮವಾರ ಬೆಳಿಗ್ಗೆ ಖತರ್ನಲ್ಲಿ ಸ್ಫೋಟ ಸಂಭವಿಸಿರುವುದಾಗಿ ಕುವೈಟ್ನ ರಕ್ಷಣಾ ಸಚಿವಾಲಯ ಹೇಳಿದೆ. ಸೌದಿಯ ವಾಯು ರಕ್ಷಣಾ ವ್ಯವಸ್ಥೆಯು ದೇಶದ ಗಡಿ ದಾಟಿ ಬಂದ ಕನಿಷ್ಠ ಮೂರು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ನಾಲ್ಕು ಡ್ರೋನ್ಗಳನ್ನು ಹೊಡೆದುರುಳಿಸಿದೆ ಎಂದು ಸೌದಿಯ ರಕ್ಷಣಾ ಸಚಿವಾಲಯ ಹೇಳಿದೆ.





