ಯುದ್ಧ ಕೊನೆಗೊಳಿಸಲು 3 ಷರತ್ತು ಮುಂದಿರಿಸಿದ ಇರಾನ್ : ವರದಿ

Photo Credit : AP , PTI
ಟೆಹ್ರಾನ್, ಮಾ.12: ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ನ ಮಿಲಿಟರಿ ಕಾರ್ಯಾಚರಣೆ ಮತ್ತು ಅದಕ್ಕೆ ಇರಾನ್ನ ಪ್ರತಿ ದಾಳಿಯು ಮೂರನೇ ವಾರಕ್ಕೆ ಕಾಲಿರಿಸುತ್ತಿದ್ದಂತೆಯೇ ಯುದ್ಧವನ್ನು ಕೊನೆಗೊಳಿಸಲು ಇರಾನ್ 3 ಷರತ್ತುಗಳನ್ನು ಮುಂದಿರಿಸಿರುವುದಾಗಿ ವರದಿಯಾಗಿದೆ.
ಇರಾನ್ ರಾಷ್ಟ್ರದ ಹಕ್ಕುಗಳ ಗುರುತಿಸುವಿಕೆ, ಪರಿಹಾರ ಪಾವತಿ ಮತ್ತು ಭವಿಷ್ಯದ ಆಕ್ರಮಣದ ವಿರುದ್ಧ ಖಾತರಿ- ಈ ಮೂರು ಷರತ್ತುಗಳನ್ನು ಇರಾನ್ ಮುಂದಿರಿಸಿದೆ. ಇರಾನ್ ಶಾಂತಿಗೆ ಬದ್ಧವಾಗಿದೆ, ಆದರೆ ತನ್ನ ಷರತ್ತುಗಳನ್ನು ಅಮೆರಿಕ ಮತ್ತು ಇಸ್ರೇಲ್ ಒಪ್ಪಿಕೊಂಡರೆ ಮಾತ್ರ ಸಂಘರ್ಷ ಕೊನೆಗೊಳ್ಳಬಹುದು. ಇರಾನ್ನ ಭದ್ರತೆಗೆ ದೃಢವಾದ ಅಂತಾರಾಷ್ಟ್ರೀಯ ಭರವಸೆ ದೊರೆತರೆ ಮಾತ್ರ ಇಸ್ರೇಲ್ ಮತ್ತು ಅಮೆರಿಕದ ದಾಳಿಯಿಂದ ಪ್ರಚೋದಿಸಲ್ಪಟ್ಟ ಯುದ್ಧವು ನಿಲ್ಲಬಹುದು ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಹೇಳಿದ್ದಾರೆ.
Next Story





