Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. F-15 ಯುದ್ಧ ವಿಮಾನದಲ್ಲಿದ್ದ 2ನೇ...

F-15 ಯುದ್ಧ ವಿಮಾನದಲ್ಲಿದ್ದ 2ನೇ ಪೈಲಟ್‌ನನ್ನು ರಕ್ಷಿಸಲಾಗಿದೆ: ಡೊನಾಲ್ಡ್ ಟ್ರಂಪ್

ವಾರ್ತಾಭಾರತಿವಾರ್ತಾಭಾರತಿ5 April 2026 7:48 PM IST
share
F-15 ಯುದ್ಧ ವಿಮಾನದಲ್ಲಿದ್ದ 2ನೇ ಪೈಲಟ್‌ನನ್ನು ರಕ್ಷಿಸಲಾಗಿದೆ: ಡೊನಾಲ್ಡ್ ಟ್ರಂಪ್

ವಾಶಿಂಗ್ಟನ್, ಎ.5: ಇರಾನ್ ಹೊಡೆದುರುಳಿಸಿದ್ದ ಅಮೆರಿಕದ ಎಫ್-15 ಯುದ್ಧ ವಿಮಾನದಲ್ಲಿದ್ದ ಎರಡನೇ ಪೈಲಟ್‍ನನ್ನು ರಕ್ಷಿಸುವ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಘೋಷಿಸಿದ್ದಾರೆ.

ಈ ಮಧ್ಯೆ, ಇಷ್ಫಹಾನ್ ಪ್ರಾಂತದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅಮೆರಿಕದ ಮತ್ತೊಂದು ಯುದ್ಧವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ಇರಾನ್ ಪ್ರತಿಪಾದಿಸಿದೆ.

`ಶತ್ರುವಿನ ಗಡಿಯೊಳಗೆ ಇರಾನ್‍ನ ಅಪಾಯಕಾರಿ ಪರ್ವತಗಳಲ್ಲಿ ಇದ್ದ ಈ ಕೆಚ್ಚೆದೆಯ ಯೋಧನನ್ನು ಶತ್ರುಗಳು ಬೇಟೆಯಾಡುತ್ತಿದ್ದರು. ಗೌರವಾನ್ವಿತ ಕರ್ನಲ್ ಗಾಯಗೊಂಡಿದ್ದರೂ ಕ್ಷೇಮವಾಗಿದ್ದಾನೆ. ನಮ್ಮ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಅಮೆರಿಕದ ಯಾವುದೇ ಸಿಬ್ಬಂದಿ ಪ್ರಾಣಕ್ಕೆ ಹಾನಿಯಾಗದೆ ಅಥವಾ ಗಾಯಗೊಳ್ಳದೆ ನಮ್ಮ ಎರಡೂ ಪೈಲಟ್‍ಗಳನ್ನು ಶತ್ರುಗಳ ಪ್ರದೇಶದಿಂದ ಹೊರಗೆ ತಂದಿರುವುದು ನಾವು ಇರಾನ್‍ನ ಆಗಸದ ಮೇಲೆ ಅಗಾಧವಾದ ವಾಯುಪ್ರಾಬಲ್ಯ ಮತ್ತು ಶ್ರೇಷ್ಠತೆಯನ್ನು ಸಾಧಿಸಿದ್ದೇವೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ'ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಶುಕ್ರವಾರ ರಾತ್ರಿಯೇ ಒಬ್ಬ ಪೈಲಟ್‍ನನ್ನು ಅಮೆರಿಕದ ಮಿಲಿಟರಿ ರಕ್ಷಿಸಿತ್ತು. ವಿಮಾನ ಪತನಗೊಂಡ ಸ್ಥಳದಲ್ಲಿ ಶನಿವಾರದಿಂದ ನಿರಂತರ ವೈಮಾನಿಕ ದಾಳಿ, ಸರಣಿ ಸ್ಫೋಟದ ಶಬ್ದ ಕೇಳಿಸುತ್ತಿತ್ತು. 10ಕ್ಕೂ ಹೆಚ್ಚು ಮಿಲಿಟರಿ ವಿಮಾನಗಳನ್ನು ಒಳಗೊಂಡಿದ್ದ ಅಮೆರಿಕದ ರಕ್ಷಣಾ ಕಾರ್ಯಾಚರಣೆಗೆ ಇರಾನ್‍ನಿಂದ ತೀವ್ರ ಪ್ರತಿರೋಧ ಎದುರಾಗಿತ್ತು ಎಂದು ಸ್ಥಳೀಯರನ್ನು ಉಲ್ಲೇಖಿಸಿ ಅಲ್‍ಜಝೀರಾ ವರದಿ ಮಾಡಿದೆ.

ಮಾರಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ 10ಕ್ಕೂ ಹೆಚ್ಚು ಯುದ್ಧವಿಮಾನಗಳು, ಹಲವಾರು ಸಿಬ್ಬಂದಿಗಳನ್ನು ಒಳಗೊಂಡ ಕಾರ್ಯಾಚರಣೆ ನಮ್ಮ ಕೆಚ್ಚೆದೆಯ ಪೈಲಟ್‍ನನ್ನು ಸುರಕ್ಷಿತವಾಗಿ ಹೊರತರುವಲ್ಲಿ ಯಶಸ್ವಿಯಾಗಿದೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಶುಕ್ರವಾರ ರಾತ್ರಿ ಒಬ್ಬ ಸಿಬ್ಬಂದಿಯನ್ನು ರಕ್ಷಿಸಿದ ಬಳಿಕ ಅಮೆರಿಕದ ಕಾರ್ಯಾಚರಣೆಗೆ ಇರಾನ್ ಪಡೆಗಳಿಂದ ತೀವ್ರ ಪ್ರತಿರೋಧ ಎದುರಾಗಿತ್ತು. ಕೊಹ್ಗಿಲುಯೆಹ್ ಮತ್ತು ಬೊಯರ್-ಅಹ್ಮದ್ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದ್ದು 9 ಮಂದಿ ಮೃತಪಟ್ಟಿರುವ ಮಾಹಿತಿಯಿದೆ. ಆದರೆ ಕಾರ್ಯಾಚರಣೆಗೆ ಸಂಬಂಧಿಸಿದ ದಾಳಿಯಲ್ಲಿ ಈ ಸಾವು ಸಂಭವಿಸಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಅಲ್‍ಜಝೀರಾ ವರದಿ ಮಾಡಿದೆ.

ಪೈಲಟ್‍ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನ ಘೋಷಿಸಿದ್ದ ಇರಾನ್

ಶುಕ್ರವಾರ ಅಮೆರಿಕದ ಎಫ್-15ಇ ವಿಮಾನವನ್ನು ಹೊಡೆದುರುಳಿಸಿದ ಬಳಿಕ ಇರಾನ್‍ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್‌ಜಿಸಿ) ಪರ್ವತಮಯ ನೈಋತ್ಯ ಕೊಹ್ಗಿಲುಯೆಹ್ ಮತ್ತು ಬೊಯರ್-ಅಹ್ಮದ್ ಪ್ರಾಂತವನ್ನು ಸುತ್ತುವರಿದಿತ್ತು. ಈ ಪ್ರದೇಶದಲ್ಲಿ ಪೈಲಟ್ ಅಡಗಿಕೊಂಡಿರಬಹುದು ಎಂದು ಇರಾನ್ ನಂಬಿತ್ತು.

ದಕ್ಷಿಣ ಖುಜೆಸ್ತಾನ್ ಪ್ರದೇಶದ ಕೆಲವು ಭಾಗಗಳಲ್ಲೂ ಪರಿಶೀಲನೆ ನಡೆಸಲಾಗುತ್ತಿತ್ತು ಎಂದು ಇರಾನ್‍ನ ಮಾಧ್ಯಮಗಳು ವರದಿ ಮಾಡಿದ್ದವು. ಈ ಪ್ರದೇಶದಲ್ಲಿ ಶನಿವಾರ ಅಮೆರಿಕ-ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ ಐದು ಮಂದಿ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ನಾಪತ್ತೆಯಾಗಿದ್ದ ಅಮೆರಿಕದ ಪೈಲಟ್‍ನನ್ನು ಪತ್ತೆಹಚ್ಚಿ ಸೆರೆಹಿಡಿಯಲು ನೆರವಾಗುವವರಿಗೆ 60,000 ಡಾಲರ್ ಬಹುಮಾನ ನೀಡುವುದಾಗಿ ಇರಾನ್ ಅಧಿಕಾರಿಗಳು ಘೋಷಿಸಿದ್ದರು. ಈ ಪ್ರದೇಶದಲ್ಲಿರುವ ಅಲೆಮಾರಿ ಬುಡಕಟ್ಟುಗಳು ಅಮೆರಿಕದ ಪೈಲಟ್‍ನ ಹುಡುಕಾಟ ಆರಂಭಿಸಿದ್ದರು. ರೈಫಲ್‍ಗಳು ಮತ್ತು ಇರಾನ್‍ನ ಧ್ವಜವನ್ನು ಹಿಡಿದಿರುವ ವ್ಯಕ್ತಿಗಳು ದೇಶದ ನೈಋತ್ಯ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿರುವ ವೀಡಿಯೊವನ್ನು ಇರಾನ್‍ನ ಮಾಧ್ಯಮ ಪ್ರಸಾರ ಮಾಡಿತ್ತು. ಅಮೆರಿಕದ ರಕ್ಷಣಾ ಕಾರ್ಯಾಚರಣೆಯ ಭಾಗವಾಗಿದ್ದ ಎರಡು ಬ್ಲ್ಯಾಕ್‍ಹಾಕ್ ಹೆಲಿಕಾಪ್ಟರ್‌ಗಳನ್ನು ಈ ಗುಂಪು ಹೊಡೆದುರುಳಿಸಿದೆ ಎಂದು ಇರಾನ್ ಅಧಿಕಾರಿಗಳು ಹೇಳಿದ್ದಾರೆ.

ಕಾರ್ಯಾಚರಣೆ ಸಂಪೂರ್ಣ ವಿಫಲ: ಇರಾನ್ ಮಿಲಿಟರಿ ಹೇಳಿಕೆ

ಪತನಗೊಂಡ ಯುದ್ಧ ವಿಮಾನದಲ್ಲಿದ್ದ ಪೈಲಟ್‍ನನ್ನು ರಕ್ಷಿಸುವ ಅಮೆರಿಕದ ಕಾರ್ಯಾಚರಣೆ ಸಂಪೂರ್ಣ ವಿಫಲವಾಗಿದೆ ಎಂದು ಇರಾನ್‍ನ ಮಿಲಿಟರಿ ರವಿವಾರ ಹೇಳಿದೆ.

ಪತನಗೊಂಡ ಯುದ್ಧವಿಮಾನದ ಪೈಲಟ್‍ನನ್ನು ರಕ್ಷಿಸುವ ಉದ್ದೇಶದಿಂದ ದಕ್ಷಿಣ ಇಸ್ಫಹಾನ್ ಪ್ರಾಂತದಲ್ಲಿ ಪರಿತ್ಯಕ್ತ ವಿಮಾನ ನಿಲ್ದಾಣದಲ್ಲಿ ಅಮೆರಿಕ ನಡೆಸಿದ ಕಪಟ ನಾಟಕ ವಿಫಲವಾಗಿದೆ. ಎರಡು ಸಿ-130 ಮಿಲಿಟರಿ ಸಾರಿಗೆ ವಿಮಾನಗಳು ಮತ್ತು ಎರಡು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳು ನಾಶಗೊಂಡಿವೆ' ಎಂದು ಇರಾನ್ ಮಿಲಿಟರಿಯ ಸೆಂಟ್ರಲ್ ಕಮಾಂಡ್‍ನ ವಕ್ತಾರರು ಹೇಳಿದ್ದಾರೆ.

Tags

Iranpilot
share
ವಾರ್ತಾಭಾರತಿ
ವಾರ್ತಾಭಾರತಿ
Next Story
X