ಇಸ್ರೇಲ್ ಮೇಲೆ ಪ್ರತಿದಾಳಿ ನಡೆಸುವುದಾಗಿ ಇರಾನ್ ಎಚ್ಚರಿಕೆ

Photo Credit : PTI
ಟೆಹರಾನ್, ಜೂ.7: ದಕ್ಷಿಣ ಲೆಬನಾನ್ ರಾಜಧಾನಿ ಬೈರೂತ್ನ ದಕ್ಷಿಣ ಉಪನಗರಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ` ತೀವ್ರ ಮತ್ತು ನಿರ್ಣಾಯಕ' ರೀತಿಯ ಪ್ರತಿದಾಳಿ ನಡೆಸುವುದಾಗಿ ಇರಾನ್ ರವಿವಾರ ಎಚ್ಚರಿಕೆ ನೀಡಿದೆ.
`ಇಂದು ರಾತ್ರಿ ಆಕ್ರಮಿತ ಭೂಮಿಯಲ್ಲಿ ಆಕಾಶವನ್ನು ವೀಕ್ಷಿಸಿ' ಎಂದು ಇರಾನ್ನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಗೆ ಸಂಬಂಧಿಸಿದ ಸಂಸದೀಯ ಸಮಿತಿಯ ವಕ್ತಾರ ಇಬ್ರಾಹಿಂ ರೆಝಾಯಿ ಇಸ್ರೇಲ್ಗೆ ಎಚ್ಚರಿಕೆ ನೀಡಿದ್ದಾರೆ.
ಬೈರೂತ್ ಹೊರವಲಯದ ದಹಿಯೆಹ್ ಪ್ರದೇಶದಲ್ಲಿ ರವಿವಾರ ಎರಡು ಕಟ್ಟಡಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದ ಬಳಿಕ ಇರಾನ್ ಈ ಎಚ್ಚರಿಕೆ ನೀಡಿದೆ.
Next Story




